ವಿಜಯಸಾಕ್ಷಿ ಸುದ್ದಿ, ಗದಗ : ಜೀವಿಯ ದೇಹ ಹಾಗೂ ಮನಸ್ಸು ಸಂಪೂರ್ಣವಾಗಿ ಸಮತೋಲನದಲ್ಲಿರುವುದೇ ಸದೃಢವಾಗಿದ್ದು, ಆರೋಗ್ಯವೇ ಭಾಗ್ಯವಾಗಿದೆ. ಉತ್ತಮ ಮೌಲ್ಯ, ಸರಿಯಾದ ಜೀವನ ಕ್ರಮಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಹೇಳಿದರು.
ಅವರು ಗದುಗಿನ ಸಿ.ಎಸ್. ಪಾಟೀಲ ಬಾಲಕಿಯರ ಶಾಲೆಯಲ್ಲಿ ಜರುಗಿದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆಯಿಂದಾಗಿ ಅನಾರೋಗ್ಯ ಉಂಟಾಗುತ್ತದೆ. ಹೆಣ್ಣು ಮಕ್ಕಳು ವೈಯುಕ್ತಿಕ ಸ್ವಚ್ಛತೆಯ ಕಡೆ ಹೆಚ್ಚು ಗಮನಹರಿಸಬೇಕು. ಪ್ರತಿನಿತ್ಯ ಸ್ನಾನ, ವ್ಯಾಯಾಮ, ಸರಿಯಾದ ಸಮಯಕ್ಕೆ ನೀರು ಸೇವನೆ, ಹಿತಮಿತ ಆಹಾರ ಸೇವಿಸಬೇಕೆಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಎಸ್.ಜಿ. ಕೋಲ್ಮಿ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಮಹೇಶಗೌಡ ಪಾಟೀಲ, ಯು.ಎಸ್. ಗುಂಜಾಳ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರಾಮಚಂದ್ರ ಹಂಸನೂರ ಸ್ವಾಗತಿಸಿದರು. ಈಶ್ವರ ಗೌಡರ ನಿರೂಪಿಸಿದರು. ಬಸವರಾಜ ಹೊನ್ನಗುಡಿ ವಂದಿಸಿದರು.