ಚಿಕ್ಕಮಗಳೂರು: ಕಾಫಿನಾಡಲ್ಲಿ ಮಹಿಳೆಯರ ಜೊತೆ ಸಿ.ಟಿ.ರವಿ ಭರ್ಜರಿ ಡ್ಯಾನ್ಸ್!

0
Spread the love

ಚಿಕ್ಕಮಗಳೂರು:- ಕಾಫಿನಾಡಲ್ಲಿ ಮಹಿಳೆಯರ ಜೊತೆ ಬಿಜೆಪಿ ಮುಖಂಡ ಸಿಟಿ ರವಿ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

Advertisement

ಕಾಫಿನಾಡಲ್ಲಿ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನೆ ಹಿನ್ನೆಲೆ, ಚಿಕ್ಕಮಗಳೂರು ರಸ್ತೆಗಳಲ್ಲಿ ಯುವತಿಯರು ಮನಸ್ಸೋ ಇಚ್ಛೆ ಕುಣಿಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಿ.ಟಿ.ರವಿಯನ್ನ ಯುವತಿಯರು ಮುತ್ತಿಕೊಂಡರು.

ಹೀಗಾಗಿ ಸಾವಿರಾರು ಮಹಿಳೆಯರ ಮಧ್ಯೆ ಸಿಟಿ ರವಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಹನುಮಂತಪ್ಪ ವೃತ್ತದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ CT ರವಿ ಎಲ್ಲರ ಗಮನ ಸೆಳೆದಿದ್ದಾರೆ.

20 ಸಾವಿರಕ್ಕೂ ಅಧಿಕ ಜನ ಗಣಪತಿ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆ, ಯುವ ಸಮೂಹ ಡಿಜೆ ಸೌಂಡ್ ಗೆ ಮನಸ್ಸೋ-ಇಚ್ಛೆ ಕುಣಿದು ಕುಪ್ಪಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಮೆರವಣಿಗೆ ಸಾಗಿದ್ದು ಕಂಡು ಬಂದಿದೆ.


Spread the love

LEAVE A REPLY

Please enter your comment!
Please enter your name here