ಬೆಂಗಳೂರು:- ಮಾಜಿ ಸಚಿವ ರಾಜಣ್ಣ ಹಾಗೂ ಮಾಗಡಿ ಬಾಲಕೃಷ್ಣರ ಆರೋಪ ಪ್ರತ್ಯರೋಪಗಳು ಮುಂದುವರಿದಿದೆ. ಮಾಜಿ ಸಚಿವ ರಾಜಣ್ಣ, ಅವರ ಪುತ್ರನ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾತಿಗೆ ಮುಂಚೆ ಷಡ್ಯಂತ್ರ ಷಡ್ಯಂತ್ರ ಎಂದು ಹೇಳುತ್ತಾರೆ. ಆರ್‌ಎಸ್‌ಎಸ್ ಗೀತೆ ಹೇಳಿದ್ದಾರಂತೆ,
ಅವರ ಮೇಲೆ ಕ್ರಮ ಆಗಬೇಕು ಅಂತಾರೆ. ಅದಕ್ಕೆ ಡಿಕೆಶಿಯವರು ಸ್ಪಷ್ಟನೆ ಕೊಟ್ಟು, ಕ್ಷಮೆ ಕೇಳಿದ್ದಾರೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡೋದಲ್ಲ. ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆಯುತ್ತೇನೆ, ಜನರನ್ನ ಕರೆದುಕೊಂಡು ಹೋಗುತ್ತೇನೆ ಅಂದ್ರೆ ಯಾರೂ ಲೆಕ್ಕಕ್ಕಿಲ್ಲ ಅನ್ನೋ ಮಾತಾಡ್ತಾರೆ ಅಲ್ವಾ? ಅದಕ್ಕೆ ನಾನು ಹೇಳಿದ್ದು ಎಂದು ಟಾಂಗ್ ಕೊಟ್ಟರು.
ರಾಜಣ್ಣಗೆ ಪಕ್ಷ ಅನಿವಾರ್ಯ ಅಲ್ಲ ಅಂತಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜಣ್ಣ ಏನೂ ರಿಯಾಕ್ಟ್ ಮಾಡುತ್ತಿಲ್ಲ ಅಲ್ವಾ? ಪಕ್ಷದಿಂದ ನಾನು ಗೆದ್ದಿದ್ದು ಅಂತಾ ಹೇಳಬೇಕಿತ್ತು ಅಲ್ವಾ. ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ ಇದ್ದೀನಿ. ಡಿಕೆಶಿ ಪಕ್ಷದ ಇತಿಮಿತಿ ಬಿಟ್ಟು ಏನೂ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ನಾವು ಕೂಡ ಸಿದ್ದರಾಮಯ್ಯನವರ ಶಿಷ್ಯರೇ. ಸಿದ್ದರಾಮಯ್ಯ ಹೆಸರೇಳಿ ಓಲೈಕೆ ಮಾಡಿಕೊಳ್ಳಲು ಹೇಳೋದು,
ಸಿದ್ದರಾಮಯ್ಯಗೆ ಮುಜುಗರ ಆಗದೇ ಇರೋ ರೀತಿ ನಡೆದುಕೊಳ್ಳಬೇಕಿತ್ತು. ನಿಜವಾದ ಕಾರ್ಯಕರ್ತ, ಸಿದ್ದರಾಮಯ್ಯ ನಿಜವಾದ ಅಭಿಮಾನಿಯಾದರೆ ಅವರಿಗೆ ಮುಜುಗರ ಆಗದ ರೀತಿ ನಡೆದುಕೊಳ್ಳಬೇಕಿತ್ತು. ಕ್ರಾಂತಿ ಬಗ್ಗೆ ರಾಜಣ್ಣ ಬಿಟ್ಟು ಬೇರೆ ಯಾರದರೂ ಹೇಳಿದ್ದಾರಾ? ರಾಹುಲ್ ಗಾಂಧಿಯವರ ಬಗ್ಗೆ, ಅವರ ನಿಲುವಿನ ಬಗ್ಗೆ ಉಡಾಫೆಯಾಗಿ ಮಾತಾಡಬಹುದಾ? ಸುರ್ಜೇವಾಲ ಬಂದರೆ ಕೆಟ್ಟದಾಗಿ ಮಾತನಾಡೋದು ಎಂದು ಕಿಡಿಕಾರಿದರು


