ಕ್ಯಾಬಿನೆಟ್‌ʼನಲ್ಲಿ ನನ್ನ ಮೇಲಿನ ಯಾವ ಕೇಸ್ ಕೂಡ ವಾಪಸ್ ಪಡೆದಿಲ್ಲ: ಸಿ.ಟಿ.ರವಿ

0
Spread the love

ಕಲಬುರಗಿ: ಕ್ಯಾಬಿನೆಟ್‌ʼನಲ್ಲಿ ನನ್ನ ಮೇಲಿನ ಯಾವ ಕೇಸ್ ಕೂಡ ವಾಪಸ್ ಪಡೆದಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಯಾವ ಕೇಸ್ ಇಲ್ಲ. ಕ್ಯಾಬಿನೆಟ್‌ನಲ್ಲಿ ನನ್ನ ಮೇಲಿನ ಯಾವ ಕೇಸ್ ಕೂಡ ವಾಪಸ್ ಪಡೆದಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ.

Advertisement

ನನ್ನ ಮೇಲೆ ಯಾವ ಕೇಸ್ ಇದೆ? ಯಾವುದು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಿ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ, ಹೆಚ್ ಕೆ ಪಾಟೀಲ್ ನನ್ನ ಚಾಲೆಂಜ್ ಸ್ವೀಕರಿಸಲಿ ಎಂದು ಸವಾಲ್ ಹಾಕಿದರು.

ಅವರು ನನ್ನ ರುಜುವಾತು ಮಾಡಬೇಕು. ಇಲ್ಲದೇ ಹೋದ್ರೆ ಜನತೆ ಎದುರು ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು. ಮುಸ್ಲಿಮರ ಓಲೈಕೆಗಾಗಿ ಕೇಸ್ ವಾಪಸ್ ಪಡೆದಿದ್ದಾರೆ. ನನ್ನ ಮೇಲೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಯಾವುದೇ ಕೇಸ್ ಇರಲಿಲ್ಲ. ಕುಕ್ಕರ ಬಾಂಬ್ ಬ್ಲಾಸ್ಟ್ ಪ್ರಕರಣ ಆರೋಪಿಗಳನ್ನು ಕಾಂಗ್ರೆಸ್‌ನವರು ‘ದೇ ಆರ್ ಮೈ ಬ್ರದರ್ಸ್’ ಅಂತಾ ಮುಸ್ಲಿಮರನ್ನು ಓಲೈಕೆ ಮಾಡಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here