‘ಕಲಾ ವಿಕಾಸ ಪುರಸ್ಕಾರ’ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

0
puraskara
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಲಾವಿದರ ಮತ್ತು ಕಲಾಪೋಷಕರ ಸಂಘಟನೆಯಾದ ಗದುಗಿನ ಕಲಾ ವಿಕಾಸ ಪರಿಷತ್ ಹಮ್ಮಿಕೊಂಡಿರುವ ಕಲಾ ವಿಕಾಸ ಉತ್ಸವ-2024 ಸಮಾರಂಭದಲ್ಲಿ 24ನೇ ವರ್ಷದ ಪ್ರಶಸ್ತಿ, ಕಲಾ ವಿಕಾಸ ಪುರಸ್ಕಾರ ಪ್ರಶಸ್ತಿಗೆ ಶಾಸ್ತ್ರೀಯ ಸಂಗೀತ (ಗಾಯನ ವಾದನ, ಸುಗಮ ಸಂಗೀತ, ತತ್ವಪದ, ವಚನ ಗಾಯನ, ಜಾನಪದ ಸಂಗೀತ) ಕ್ಷೇತ್ರದಲ್ಲಿ ಮತ್ತು ಶಾಸ್ತ್ರೀಯ ನೃತ್ಯ (ಭರತನಾಟ್ಯ, ಕಥಕ್, ಕುಚುಪುಡಿ, ಮೊದಲಾದ ನೃತ್ಯ) ಪ್ರಕಾರದಲ್ಲಿ ಸಾಧನೆಗೈದ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಈ ಪ್ರಶಸ್ತಿಯು ಗೌರವಧನ, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ, ಶಾಲು ಸತ್ಕಾರವನ್ನು ಒಳಗೊಂಡಿರುತ್ತದೆ. ಆಸಕ್ತ ಕಲಾವಿದರು ತಮ್ಮ ಸಂಪೂರ್ಣ ವಿವರ ಮತ್ತು ಕಲಾ ಪ್ರದರ್ಶನದ ವಿಡಿಯೋ ತುಣುಕುಗಳೊಂದಿಗೆ ವಾಟ್ಸಪ್-9886717732 ನಂಬರಿಗೆ ಅಥವಾ kvpgadag74@gmail.com ಇಮೇಲ್‌ಗೆ ಕಳಿಸಿಕೊಡಬಹುದಾಗಿದೆ.

ಪುರಸ್ಕಾರಕ್ಕೆ ಆಯ್ಕೆಯಾದ ಕಲಾವಿದರು ತಮ್ಮ ಕಲಾ ಪ್ರದರ್ಶನ ನಡೆಸಿಕೊಡುವುದು ಕಡ್ಡಾಯವಾಗಿರುತ್ತದೆ ಎಂದು ಕಲಾವಿಕಾಸ ಪರಿಷತ್ ಅಧ್ಯಕ್ಷ ಸಿ.ಕೆ.ಹೆಚ್. ಶಾಸ್ತ್ರೀ (ಕಡಣಿ) ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here