ಬೆಳಗಾವಿ: ಪಾರ್ಟಿಗೆಂದು ಕರೆದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
Advertisement
ಖಾನಾಪುರ ತಾಲೂಕಿನ ಬಲಒಗಿ ಗ್ರಾಮದ ಶಿವನಗೌಡ ಪಾಟೀಲ್ (43) ಕೊಲೆಯಾದ ವ್ಯಕ್ತಿಯಾಗಿದ್ದು, ಮನೆಯಲ್ಲಿ ಎಂ.ಕೆ ಹುಬ್ಬಳ್ಳಿಗೆ ಹೋಗಿ ಬರೋದಾಗಿ ಶಿವನಗೌಡ ಹೇಳಿ ಬಂದಿದ್ದರು. ರಾತ್ರಿಯಾದ್ರೂ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ ನಿರ್ಜನ ಪ್ರದೇಶದಲ್ಲಿ ಶವ ಕಂಡು ರೈತನೋರ್ವ ಪೊಲೀಸರ ಗಮನಕ್ಕೆ ತಂದಿದ್ದು,
ಪರಿಚಯಸ್ಥರೇ ಕರೆದು ಕುಡಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಪ್ಟ್ ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.