ಕಾಂಗ್ರೆಸ್ ಮುಖಂಡರಿಂದ ಕ್ಷೇತ್ರದಾದ್ಯಂತ ಪ್ರಚಾರ

0
congress
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನಾದ್ಯಂತ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

Advertisement

ಪುರಸಭೆ ಮಾಜಿ ಅಧ್ಯಕ್ಷರಾದ ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ರಾಜಣ್ಣ ಕುಂಬಿ, ಗಂಗಮ್ಮ ಗದ್ದಿ ಸೇರಿದಂತೆ ಹಿರಿಯ ಮುಖಂಡರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡುವಂತೆ ಮನವಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾವೇರಿ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದ್ದು, ಕಾಂಗ್ರೆಸ್ ಪಕ್ಷದ ನಾಯಕ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಜನರು ಬೆಂಬಲ ನೀಡುತ್ತಿದ್ದಾರೆ. ಆನಂದಸ್ವಾಮಿಯವರು ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿದ್ದಪ್ಪ ಪೂಜಾರ, ನೀಲಪ್ಪ ಪಡಗೇರಿ, ಪುಟ್ಟಪ್ಪ ಕೋರಿ, ಯಲ್ಲಪ್ಪ ಬನ್ನಿ, ನಾಗಪ್ಪ ಬಿಂಗಿ, ಹುಚ್ಚಪ್ಪ ಮೆಡ್ಲೇರಿ, ಚನ್ನಪ್ಪ ಬಳಗಪ್ಪನವರ, ಬಸಪ್ಪ ನೀಲಪ್ಪನವರ, ಯಲ್ಲಪ್ಪ ಪೂಜಾರ, ರಾಮಣ್ಣ ಪೂಜಾರ, ನಿಂಗಪ್ಪ ಗೌಡನಾಯ್ಕರ್, ಮಲ್ಲೇಶಪ್ಪ ಗೊಜಗೊಜಿ, ಮಾಂತೇಶ ಗೊಜಗೊಳಿ, ಮಲ್ಲೇಶ ಗೊಜಗೊಜಿ ಸೇರಿದಂತೆ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಇದ್ದರು.


Spread the love

LEAVE A REPLY

Please enter your comment!
Please enter your name here