HomeVijaya Specialಶಿಬಿರಗಳು ಮನೋವಿಕಾಸಕ್ಕೆ ದಾರಿ : ಡಿ.ಎಫ್. ಪಾಟೀಲ

ಶಿಬಿರಗಳು ಮನೋವಿಕಾಸಕ್ಕೆ ದಾರಿ : ಡಿ.ಎಫ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತರುವುದೇ ಇಂದಿನ ಮಹತ್ವದ ಜವಾಬ್ದಾರಿಯಾಗಿದೆ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸದ ಪ್ರಮುಖ ಹಾದಿಯಾಗಿವೆ ಎಂದು ಮುಖ್ಯೋಪಾಧ್ಯಾಯೆ ಡಿ.ಎಫ್. ಪಾಟೀಲ ಅಭಿಪ್ರಾಯಪಟ್ಟರು.

ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-4ರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರ `ಚೈತ್ರದ ಚಿಗುರು’ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.4ರ ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಮಾತನಾಡಿ, ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕಾಗಿ ಹಲವಾರು ಚಟುವಟಿಕೆಗಳನ್ನೊಳಗೊಂಡ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಶಿಬಿರದಲ್ಲಿ ಮಕ್ಕಳಿಗಾಗಿ ಭೌತಿಕ ಹಾಗೂ ಬೌದ್ಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸಂಗಮೇಶ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ನ್ಯಾಯವಾದಿ ಪ್ರಕಾಶ ವಾಲಿ ಮಾತನಾಡಿದರು. ವೇದಿಕೆಯಲ್ಲಿ ಕ.ರಾ.ವಿ.ಪ ಜಿಲ್ಲಾ ಅಧ್ಯಕ್ಷ ರಮೇಶ ರಿತ್ತಿ, ಸಿಆರ್‌ಪಿ ಉಮೇಶ ನೇಕಾರ, ಶಿಬಿರದ ನಿರ್ದೇಶಕ ನಿರ್ಮಲ ಅರಳಿ, ಹಿರಿಯ ಶಿಕ್ಷಕ ಬಿ.ಬಿ. ದನದಮನಿ, ಎಸ್.ಬಿ. ಅಣ್ಣಿಗೇರಿ, ಎಸ್.ಎನ್. ತಾಯಮ್ಮನವರ, ಬಿಆರ್‌ಪಿ ಬಸವರಾಜ ಯರಗುಪ್ಪಿ, ಸಿಆರ್‌ಪಿ ಗಿರೀಶ ನೇಕಾರ ಉಪಸ್ಥಿತರಿದ್ದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್. ಪಾಟೀಲ, ರಾಜೇಶ ಉಮಚಗಿ, ಬಿ.ಟಿ. ಹೆಬ್ಬಾಳ ವೇದಿಕೆಯಲ್ಲಿ ಹಾಜರಿದ್ದರು. ವಿವಿಧ ಶಾಲೆಗಳ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು. ಶ್ರೀನಿಧಿ ಶಂಕ್ರಪ್ಪ ಶಿಳ್ಳಿನ ಪ್ರಾರ್ಥಿಸಿದಳು. ಶಿಬಿರದ ನಿರ್ದೇಶಕ ಈರಣ್ಣ ಗಾಣಿಗೇರ ಸ್ವಾಗತಿಸಿದರು.

ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಕಸಾಪ ಲಕ್ಷ್ಮೇಶ್ವರ ಘಟಕವು ಪ್ರತಿ ವರ್ಷ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಮಕ್ಕಳು ಆಡಿ ಕಲಿ, ಮಾಡಿ ತಿಳಿ ತತ್ವ ಆಧರಿಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!