ಒಟ್ಟಾವೊ: ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2013ರಿಂದ ಕೆನಡಾದ ಲಿಬರಲ್ ಪಕ್ಷದ ನಾಯಕ ಹಾಗೂ 2015ರಿಂದ ಪ್ರಧಾನಿಯಾಗಿರುವ ಟ್ರುಡೋ, ಈ ಎರಡೂ ಹುದ್ದೆಗಳಿಗೂ ಏಕಾಏಕಿ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ.
“…ಪಕ್ಷವು ತನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡಿದ ನಂತರ ನಾನು ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದೇನೆ…ಕಳೆದ ರಾತ್ರಿ ನಾನು ಲಿಬರಲ್ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ಪ್ರಕ್ರಿಯೆ ಆರಂಭಿಸುವಂತೆ ಕೇಳಿಕೊಂಡಿದ್ದೇನೆ..” ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
“ಆಂತರಿಕ ಕಲಹಗಳು” ಮುಂದಿನ ಚುನಾವಣೆಯಲ್ಲಿ “ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ” ಎಂದು ಟ್ರೂಡೊ ಹೇಳಿದ್ದು, ಲಿಬರಲ್ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ತಾವು ಪ್ರಧಾನಿಯಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಟ್ರುಡೊ ಅವರು ತಮ್ಮ ಲಿಬರಲ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿರುವ ಕಾರಣ ರಾಜೀನಾಮೆ ನೀಡಿದ್ದಾರೆ.