ವಿಜಯನಗರ: ಸಿದ್ದರಾಮಯ್ಯರನ್ನು ಅಲುಗಾಡಿಸೋಕೆ ಆಗೊಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಬಿವೈ ವಿಜಯೇಂದ್ರಹೇಳಿದಂತೆ ಏನೂ ಆಗೊಲ್ಲ. ಟಗರು ಅಲ್ಲಾಡೊಲ್ಲ, ಆಚೆ, ಈಚೆ ಅಲ್ಲಾಡೊಲ್ಲ ಏನಿದ್ರೂ ನೇರನೇ. ವಿಜಯೇಂದ್ರ ಹಗಲುಗನಸು ಕಾಣುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪಾಪ್ಯೂಲಾರಿಟಿ ಸಹಿಸಿಕೊಳ್ಲೋಕೆ ಆಗ್ತಿಲ್ಲಾ. ಸಿದ್ದರಾಮಯ್ಯರನ್ನು ಡಿಸ್ಟಾರ್ಬ್ ಮಾಡಿದ್ರೆ ಕಾಂಗ್ರೆಸ್ ಪಕ್ಷವನ್ನು ಡಿಸ್ಟಾರ್ಬ್ ಮಾಡಿದಹಾಗೆ ಅಂತ ಲೆಕ್ಕಾಚಾರ ಹಾಕಿದ್ದಾರೆ.
ಆದರೆ ಸಿದ್ದರಾಮಯ್ಯರನ್ನು ಅಲುಗಾಡಿಸೋಕೆ ಆಗೊಲ್ಲ. ದೇವರಾಜು ಅರಸು ಆದ ಮೇಲೆ ಎರಡನೇ ಬಾರಿ ಸಿಎಂ ಆದವರು ಸಿದ್ದರಾಮಯ್ಯನವರು. ಅಂತವರನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಏನು ಮಾಡೋಕೆ ಸಾಧ್ಯ? ಬಿಜೆಪಿಗೆ ಜನರು ಪೂರ್ಣಬಹುಮತ ಕೊಟ್ಟಿಲ್ಲಾ, ಮುಂದೆನೂ ರಾಜ್ಯದ ಜನ ಬಹುಮತ ಕೊಡೋಲ್ಲಾ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಆದರೆ ಕಾಂಗ್ರೆಸ್ ಒಂದೇ ಮನೆ ಆಗಿದೆ ಎಂದು ಲೇವಡಿ ಮಾಡಿದರು.