ಕುತ್ತಿಗೆ ನೋವು ಸಹಿಸಲು ಆಗುತ್ತಿಲ್ಲವೇ..? ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ ನೋಡಿ

0
Spread the love

ಗಂಟೆಗಟ್ಟಲೆ ಲ್ಯಾಪ್ಟಾಪ್, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು, ಅಥವಾ ಹೆಚ್ಚು ಹೊತ್ತು ಮೊಬೈಲ್ನಲ್ಲಿ ಮುಳುಗುವುದು. ಡಿಜಿಟಲ್ ಯುಗದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಅಭ್ಯಾಸದಿಂದ ಕುತ್ತಿಗೆ ನೋವು, ಸ್ನಾಯು ಸೆಳೆತ, ಬೆನ್ನು ನೋವು ಹೀಗೆ ನಾನಾ ರೀತಿಯ ದೈಹಿಕ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ.

Advertisement

ಕತ್ತಿನ ಭಾಗದಲ್ಲಿ ಕಾಡುವ ನೋವು ದೇಹದ ಇತರ ಭಾಗದಲ್ಲಿಯೂ ಅಸಹಜತೆ ಹಾಗೂ ನೋವನ್ನು ಉಂಟುಮಾಡುವುದು.  ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ಬಗ್ಗೆ ಕೆಲವೊಂದಷ್ಟು ಟಿಪ್ಸ್ ಅನ್ನು ನೀಡಿದ್ದಾರೆ. ಅದು ಏನೆಂದು ತಿಳಿದುಕೊಳ್ಳೋಣ ಬನ್ನಿ.

​ಕತ್ತಿನ ವ್ಯಾಯಾಮ

ಆನ್‍ಲೈನ್ ಕೆಲಸ, ತರಗತಿ ಅಥವಾ ಇನ್ಯಾವುದೇ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡುವ ಪರಿಸ್ಥಿತಿ ಇದ್ದರೆ ಹದಿನೈದು ನಿಮಿಷಕ್ಕೆ ಒಮ್ಮೆ ಅಥವಾ ಅರ್ಧ ಗಂಟೆಗೆ ಒಮ್ಮೆ ಕತ್ತಿನ ಭಂಗಿಯನ್ನು ಬದಲಿಸುವುದು ಸೂಕ್ತ. ಇಲ್ಲವೇ ಆಗಾಗ ಕೆಲವು ಲಘು ವ್ಯಾಯಾಮವನ್ನು ಮಾಡುವುದು ಉತ್ತಮ. ಆಗ ಕತ್ತು ನೋವು ಬರುವುದನ್ನು ಸುಲಭವಾಗಿ ತಡೆಯಬಹುದು.

ಬಿಸಿ ನೀರಿನ ಚೀಲ

ಬಿಸಿ ನೀರಿನ ಚೀಲವನ್ನು ನೋವಿನ ಸ್ಥಳ ಅಥವಾ ಪೀಡಿತ ಪ್ರದೇಶದಲ್ಲಿ ಇಟ್ಟುಕೊಳ್ಳುವುದರಿಂದ ನೋವು ಕಡಿಮೆ ಆಗುವುದು. ಸ್ನಾಯುಗಳಿಗೆ ಒತ್ತಡ ಕಡಿಮೆಯಾಗಿ ನೋವು ನಿವಾರಣೆಯಾಗುವುದು. ಸ್ನಾಯುಗಳು ವಿಶ್ರಾಂತಿಯನ್ನು ಪಡೆದು ಇತರ ನೋವು ಉಂಟಾಗುವುದನ್ನು ತಡೆಯುತ್ತದೆ.

ಭಾರವಾದ ತೂಕ ಎತ್ತುವುದ ತಪ್ಪಿಸಿ
ದೈಹಿಕ ಚಟುವಟಿಕೆಯಿಂದಾಗಿ ಕುತ್ತಿಗೆಯಲ್ಲಿ ಬಿಗಿತ ಮತ್ತು ನೋವು ಪ್ರಾರಂಭವಾಗಿದ್ದರೆ,  ನೋವು ನಿವಾರಣೆಯಾಗುವವರೆಗೆ ಆ ಚಟುವಟಿಕೆಯನ್ನು ಮಾಡುವುದನ್ನು ತಪ್ಪಿಸಬೇಕು. ಭಾರವಾದ ಸರಕುಗಳನ್ನು ಎತ್ತುವುದನ್ನು ತಪ್ಪಿಸಬೇಕು. ಏಕೆಂದರೆ ಇದು  ಕುತ್ತಿಗೆ ನೋವನ್ನು ಹೆಚ್ಚಿಸಬಹುದು.

ಈ ಕೆಲಸವನ್ನು ಮಾಡಿ
–  ತಲೆಯನ್ನು ಕುಲುಕದಿರಲು ಪ್ರಯತ್ನಿಸಿ. ಕುತ್ತಿಗೆಯನ್ನು ಒತ್ತಡ ಕೊಟ್ಟು ಬಾಗಿಸಬೇಡಿ. ಇದರಿಂದ ಉರಿಯೂತ ಹೆಚ್ಚಾಗಬಹುದು.

-ನೋವು ಹೆಚ್ಚು ಇಲ್ಲದಿದ್ದರೆ,  ತಲೆಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಮತ್ತು ನಂತರ ಮೇಲಕ್ಕೆ ಮತ್ತು ಕೆಳಕ್ಕೆ ಚಾಚಲು ಪ್ರಯತ್ನಿಸಿ. ಇದರಿಂದ ಪರಿಹಾರ ದೊರೆತಂತೆ ಆಗುತ್ತದೆ.

-ಕುತ್ತಿಗೆಯ ಬಿಗಿ ಸ್ನಾಯುಗಳನ್ನು ಸಡಿಲಗೊಳಿಸಲು ಕೆಲವು ಗಂಟೆಗಳ ಕಾಲ ನೆಕ್ ಕಾಲರ್ ಧರಿಸಿ.

– ದಿಂಬುಗಳಿಲ್ಲದೆ ಮಲಗಿ ಅಥವಾ ವಿಶೇಷವಾಗಿ ಕುತ್ತಿಗೆಗೆ ಬೆಂಬಲವಾಗಿ ವಿನ್ಯಾಸಗೊಳಿಸಲಾದ ದಿಂಬುಗಳನ್ನು ಬಳಸಿ.


Spread the love

LEAVE A REPLY

Please enter your comment!
Please enter your name here