ವಿಜಯಪುರ: ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಬಸವನ ಬಾಗೇವಾಡಿ ರಸ್ತೆಯಲ್ಲಿ ಜರುಗಿದೆ.
Advertisement
ಆರೀಪ್ ವಡ್ಡೋಡಗಿ (35), ಮೈಬೂಬ್‌ಸಾಬ್ ಕರಜಗಿ (65) ಸ್ಥಳದಲ್ಲೆ ಸಾವನ್ನಪ್ಪಿದ ದುರ್ದೈವಿಗಳು. ಹೂವಿನ ಹಿಪ್ಪರಗಿಯಿಂದ ದೇವರಹಿಪ್ಪರಗಿ ಕಡೆಗೆ ಬೈಕ್ ಸವಾರರು ಬರ್ತಿದ್ದರು. ಇದೇ ವೇಳೆ ಬಸವನ ಬಾಗೇವಾಡಿ ಕಡೆಗೆ ಹೊರಟಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಬೈಕ್ ಡಿಕ್ಕಿ ಹೊಡೆದ ಬಳಿಕ ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹಾಗೂ ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನಿಗಾಗಿ ತಲಾಶ್ ಕೈಗೊಳ್ಳಲಾಗಿದೆ.