ಕಾರು ಚಾಲಕ ಆತ್ಮಹತ್ಯೆ: ತಮ್ಮ ಮೇಲಿನ ಆರೋಪಕ್ಕೆ ಸುಧಾಕರ್ ಹೇಳಿದ್ದೇನು..?

0
Spread the love

ನವದೆಹಲಿ: ಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸುಧಾಕರ್, ಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ.

Advertisement

ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ಬಾಬು ಅನ್ನೋ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿ ಅಂತ ಗೊತ್ತಾಗಿದೆ . ಆತ್ಮಹತ್ಯೆಗೆ ಶರಣಾಗಿರುವುದು ಜಿಲ್ಲಾ ಪಂಚಾಯತ್ ಆವರಣದಲ್ಲಿ . ಮೊದಲು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಮೊದಲನೆಯದಾಗಿ ನಂಗೆ ಈ ಸಾವು ದುಃಖ ತಂದಿದೆ.

ನನ್ನ ಸಾರ್ವಜನಿಕ ಜೀವನದಲ್ಲಿ ಈ ಬಾಬು ಅನ್ನೋ ವ್ಯಕ್ತಿಯನ್ನ ಭೇಟಿ ಆಗಿಲ್ಲ . ನಾನು ಎರಡು ಬಾರಿ ಸಚಿವ ಆಗಿದ್ದೇನೆ, ಶಾಸಕ ಆಗಿದ್ದೇನೆ . ಈ ಸಮಯದಲ್ಲಿ ಹಲವರಿಗೆ ಕೆಲಸ ಕೊಡಿಸಿದ್ದೇನೆ, ಆದ್ರೆ ಈ ವ್ಯಕ್ತಿ ನಂಗೆ ಯಾರೂ ಅಂತ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here