ನದಿಗೆ ಉರುಳಿಬಿದ್ದ ಕಾರು: ಐವರು ದುರ್ಮರಣ!

0
Spread the love

ರತ್ನಗಿರಿ:- ನದಿಗೆ ಕಾರು ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜರುಗಿದೆ. ಘಟನೆಯಿಂದ ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮುಂಬೈ-ಗೋವಾ ಹೆದ್ದಾರಿಯಲ್ಲಿ ಮುಂಬೈನಿಂದ ದೇವ್ರುಖ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಜಗ್ಬುಡಿ ನದಿ ಸೇತುವೆಯಿಂದ ನೇರವಾಗಿ 100 ಅಡಿ ಕೆಳಗೆ ಕಾರು ಬಿದ್ದಾಗ ಅಪಘಾತ ಸಂಭವಿಸಿದೆ. ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿ, ನಂತರ ಶವಗಳನ್ನು ವಾಹನದಿಂದ ಹೊರತೆಗೆಯಲಾಯಿತು.

ಸೋಮವಾರ ರಾತ್ರಿ ಮುಂಬೈನ ನಲಸೋಪರಾ ಪೂರ್ವದಲ್ಲಿರುವ ತುಲಿಂಜ್ ಪೊಲೀಸ್ ಠಾಣೆಯ ಮುಂದೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಂಬ್ಯುಲೆನ್ಸ್ ಈ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿತ್ತು, ಸೈರನ್ ಹಾಕಿದ್ದರೂ ದಾರಿಯಲ್ಲಿಲ ಹೋಗಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಆಂಬ್ಯುಲೆನ್ಸ್ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿಯೇ ಇರಬೇಕಾಯಿತು.


Spread the love

LEAVE A REPLY

Please enter your comment!
Please enter your name here