ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಮನೆಯ ಮುಂದೆ ತಮ್ಮ ಕಾರುಗಳನ್ನೂ ನಿಲ್ಲಿಸುವ ಬಗ್ಗೆ ಯೋಷನೆ ಮಾಡುವಂತ ಸ್ಥಿತಿ ಬಂದಿದೆ. ಹೌದು ನಗರದಲ್ಲಿ ಕಾರು ಪಾರ್ಟ್ಸ್ ಕಳ್ಳನೋರ್ವ ಆ್ಯಕ್ಟೀವ್ ಆಗಿದ್ದು,
ಸೈಲಾಂಟೆಗೆ ಬಂದು ಕಾರಿನ ಪಾರ್ಟ್ಸ್ ಕದ್ದು ಎಸ್ಕೇಪ್ ಆಗ್ತಾನೆ. ರೆಸಿಡೆನ್ಸಿ ಏರಿಯಾಗಳೇ ಈತನ ಟಾರ್ಗೆಟ್. ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರುಗಳ ಪಾರ್ಟ್ಸ್ ಕದಿಯೋದೇ ಈತನ ಖಯಾಲಿ ಆಗಿದೆ.
ಬೆಳ್ಳಂ ಬೆಳಗ್ಗೆ ಫಿಲ್ಡಿಗಿಳಿಯುವ ಈತ, ಮೊದಲು ಫೇಕ್ ನಂಬರ್ ಪ್ಲೇಟ್ ಅಳವಡಿಸ್ತಾನೆ. ನಂತರ ಕಳ್ಳತನದ ಖಯಾಲಿ ಶುರು ಮಾಡ್ತಾನೆ. ವ್ಹೀಲ್, ಮಿರರ್ ನಂತವ ವಸ್ತುಗಳನ್ನ ಕಿತ್ತು ಎಸ್ಕೇಪ್ ಆಗ್ತಾನೆ..
ಖತರ್ನಾಕ್ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಿವಾಸಿಯೊಬ್ಬ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಪಾರ್ಟ್ಸ್ ಕಳ್ಳತನ ಮಾಡಿದ್ದ. ಮೊನ್ನೆ ಬೆಳಗ್ಗೆ 6ಗಂಟೆ ಸುಮಾರಿಗೆ ಈ ಕಳ್ಳ ಕೃತ್ಯ ಎಸಗಿದ್ದಾನೆ. ಸದ್ಯ ಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ.