ಡಿಕೆ ಶಿವಕುಮಾರ್ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಕಾರು ಪತ್ತೆ! ಫಾರ್ಚೂನರ್ ವಶಕ್ಕೆ

0
Spread the love

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಟೊಯೋಟಾ ಫಾರ್ಚೂನರ್ ಕಾರು ಪತ್ತೆಯಾಗಿದ್ದು, ಕಾರಿನ ಮಾಲೀಕ EMI ಕಟ್ಟದ ಕಾರಣ ಕಾರು ಸೀಜ್ ಆಗಬಾರದೆಂದು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬಳಸಿದ್ದ ಮಾಹಿತಿ ಬೆಳಕಿಗೆ ಬಂದಿದೆ.

Advertisement

ಸೆಪ್ಟೆಂಬರ್ 7ರಂದು ಡಿಕೆ ಶಿವಕುಮಾರ್ ಅವರ ನಿವಾಸದ ಬಳಿ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಸದಾಶಿವನಗರ ಟ್ರಾಫಿಕ್ ಪೊಲೀಸರು ಗಮನಿಸಿ, ಚಾಲಕನಿಗಾಗಿ ಹುಡುಕಿದರೂ ಯಾರೂ ಇರಲಿಲ್ಲ. ಕಾರನ್ನು ಟೋಯಿಂಗ್ ಮಾಡಲು ಮುಂದಾದಾಗ, ಮುಂದಿನ ನಂಬರ್‌ಪ್ಲೇಟ್ KA51MW6814 ಎಂದು ಕಂಡುಬಂದಿದ್ದು, ಆ ನಂಬರಿನ ಆಧಾರದ ಮೇಲೆ ಮಾಲೀಕ ದೀಪಕ್ ಅವರಿಗೆ ಕರೆ ಮಾಡಿದಾಗ,

“ನನ್ನ ಕಾರು ಮನೆಯ ಬೇಸ್‌ಮೆಂಟ್‌ನಲ್ಲೇ ನಿಂತಿದೆ” ಎಂದು ಹೇಳಿದ್ದಾರೆ. ಹಿಂಭಾಗ ಪರಿಶೀಲಿಸಿದಾಗ, ಮೂಲ ನಂಬರ್‌ಪ್ಲೇಟ್ ಮೇಲೆ ನಕಲಿ ಪ್ಲೇಟ್ ಅಂಟಿಸಿರುವುದು ಬಹಿರಂಗವಾಗಿದೆ. ಹಿಂಭಾಗದ ನಂಬರ್‌ಪ್ಲೇಟ್ KA42P6606, ಇದು ರಾಮನಗರ ಆರ್‌ಟಿಒಯಲ್ಲಿ ಮಂಜುನಾಥ್ ಎಂಬವರ ಹೆಸರಲ್ಲಿ ನೋಂದಾಯಿತಾಗಿದೆ ಎಂದು ಪತ್ತೆಯಾಯಿತು.

ಈ ವೇಳೆ ಫಾರ್ಚೂನರ್ ಕಾರನ್ನು ಸೀಜ್ ಮಾಡಿ, ಮಾಲೀಕ ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಕಾರು ಸೀಜ್ ಆಗಿ ಐದು ದಿನಗಳಾದರೂ ಮಾಲೀಕ ಬಂದು ಬಿಡಿಸಿಕೊಳ್ಳದಿರುವುದು ಪೊಲೀಸರ ಅನುಮಾನ ಹೆಚ್ಚಿಸಿದೆ.


Spread the love

LEAVE A REPLY

Please enter your comment!
Please enter your name here