ಹೃದಯ ಸ್ತಂಭನ; ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸಕ ಸಾವು!

0
Spread the love

ಚೆನ್ನೈ:– ಹೃದಯ ಸ್ತಂಭನದಿಂದ ಆಸ್ಪತ್ರೆಯಲ್ಲಿ ರೌಂಡ್ಸ್‌ನಲ್ಲಿದ್ದಾಗಲೇ ಹೃದಯ ಶಸ್ತ್ರಚಿಕಿತ್ಸಕ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ಜರುಗಿದೆ.

Advertisement

ಡಾ. ಗ್ರಾಡ್ಲಿನ್ ರಾಯ್ (39) ಸಾವನ್ನಪ್ಪಿದ ಹೃದಯ ಶಸ್ತ್ರಚಿಕಿತ್ಸಕ. ಭಾರಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಡಾ. ಗ್ರಾಡ್ಲಿನ್‌ ರಾಯ್‌ ಅವರು ವಾರ್ಡ್‌ನಲ್ಲಿ ರೌಂಡ್ಸ್‌ ಹಾಕುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಸಹೋದ್ಯೋಗಿಗಳು ಪರೀಕ್ಷೆಗೆ ಒಳಪಡಿಸಿದರು. ಸಿಪಿಆರ್‌ ಮಾಡಿದರು. ಆಂಜಿಯೋಪ್ಲಾಸ್ಟಿ ಕೂಡ ಮಾಡಿದರು. ಇಂಟ್ರಾ-ಆರ್ಟಿಕ್‌ ಬಲೂನ್‌ ಪಂಪ್‌, ಇಸಿಎಂಒ ಕೂಡ ಮಾಡಲಾಯಿತು. ಆದರೆ, 100% ಎಡ ಮೇನ್‌ ಆರ್ಟರಿ ಅಡಚಣೆಯಿಂದಾಗಿ ಹೃದಯ ಸ್ತಂಭನ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ವೈದ್ಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸಹೋದ್ಯೋಗಿಯ ನಿಧನಕ್ಕೆ ಡಾ. ಸುಧೀರ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ. ದೀರ್ಘ-ಅನಿಯಮಿತ ಕೆಲಸದ ಸಮಯ, ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿ, ಮಾನಸಿಕ ಹೊರೆ, ಅಧಿಕ ಒತ್ತಡ, ಧೂಮಪಾನ ಮತ್ತು ಮದ್ಯಪಾನವು ವೈದ್ಯಕೀಯ ವೃತ್ತಿಪರರಿಗೆ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಕುಮಾರ್‌ ಅವರು ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here