HomeKarnataka Newsಶೋಭಾಯಾತ್ರೆಗೆ ಪೆಟ್ರೋಲ್, ‌ಬಾಂಬ್, ಕಲ್ಲು ಹಿಡಿದು ಹೋಗಿ: ಹಿಂದೂಗಳಿಗೆ ಪ್ರತಾಪ್ ಸಿಂಹ ಕರೆ!

ಶೋಭಾಯಾತ್ರೆಗೆ ಪೆಟ್ರೋಲ್, ‌ಬಾಂಬ್, ಕಲ್ಲು ಹಿಡಿದು ಹೋಗಿ: ಹಿಂದೂಗಳಿಗೆ ಪ್ರತಾಪ್ ಸಿಂಹ ಕರೆ!

For Dai;y Updates Join Our whatsapp Group

Spread the love

ಯಾದಗಿರಿ:- ಬಿಜೆಪಿ ಮುಖಂಡ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮೆರವಣಿಗೆ ತೆರಳುವಾಗ ಮುಸಲ್ಮಾನರಂತೆ ಸನ್ನದ್ಧರಾಗಿ ಹೋಗುವಂತೆ ಕರೆ ಕೊಟ್ಟಿದ್ದಾರೆ.

ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ ಅವರು, ಮುಸಲ್ಮಾನರಂತೆ ಪೆಟ್ರೋಲ್ ‌ಬಾಂಬ್, ಕಲ್ಲು ಹಿಡಿದು ಶೋಭಾಯಾತ್ರೆಗೆ ಹೋಗುವಂತೆ ಕರೆ ಕೊಟ್ಟಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಬಹಳ ದೊಡ್ಡ ಶೋಭಾಯಾತ್ರೆ ಇದೆ. ಲಕ್ಷಾಂತರ ಜನ ಹಿಂದೂಗಳು ಭಾಗಿ ಆಗುತ್ತಾರೆ. ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡಲು ಬಯಸ್ತೀನಿ. ಈ ಸರ್ಕಾರ ನಿಮ್ಮನ್ನ ರಕ್ಷಣೆ ‌ಮಾಡೋದಿಲ್ಲ, ಹೀಗಾಗಿ ಮುಸ್ಲಿಮರು ಹೇಗೆ ಪೆಟ್ರೋಲ್ ಬಾಂಬ್, ತಲ್ವಾರ್ ಬಳಸುತ್ತಾರೋ, ಹಾಗೇ ನೀವು ಕೂಡ ಸನ್ನದ್ಧರಾಗಿ‌ ಮೆರವಣಿಗೆ ಹೋಗಿ ಎಂದು ಕರೆ ಕೊಟ್ಟಿದ್ದಾರೆ.

ಇನ್ನು ನಾಗಮಂಗಲದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ನೋಡಿದರೆ ರಾಜ್ಯ ಸರ್ಕಾರಕ್ಕೆ ಗಣೇಶ ಮೆರವಣಿಗೆ, ಹಿಂದೂಗಳ ಹಬ್ಬ ಹರಿದಿನ ನಡೆಯುವುದು ಇಷ್ಟವಿಲ್ಲ ಎಂಬ ಸಂದೇಶವನ್ನ ನಾಗಮಂಗಲ ಘಟನೆ ‌ಮೂಲಕ ಹೊರ ಹಾಕಿದೆ. ಕಳೆದ ವರ್ಷ ನಾಗಮಂಗಲದ ಮೈಸೂರು ರಸ್ತೆ ಬಳಿ ದರ್ಗಾ ಎದುರು ಗಲಾಟೆ ಆಗಿತ್ತು. ಅನಗತ್ಯವಾಗಿ ಮುಸಲ್ಮಾನರು ಕಲ್ಲು ತೂರಾಟ ಮಾಡಿದ್ದರು.

ಈ ವರ್ಷ ಅದೇ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗುತ್ತದೆ ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಿತ್ತು. ಆದ್ರೆ, ಅದೇ ರಸ್ತೆಯಲ್ಲಿ ಈ ಬಾರಿ ಮೆರವಣಿಗೆ ಹೋಗಬೇಕಾದರೆ ಕಲ್ಲು ತೂರಾಟ ಮಾತ್ರವಲ್ಲ, ಪೆಟ್ರೋಲ್ ಬಾಂಬ್ ಹಾಕಿ ಕಲ್ಲು, ಚಪ್ಪಲಿ ಬಿಸಾಡಿ ತಲ್ವಾರ್ ತೋರಿಸಿದರು. ಹಾಗೇ ಹಿಂದೂಗಳ ಅಂಗಡಿ ಟಾರ್ಗೆಟ್ ‌ಮಾಡಿ ಸುಟ್ಟು ಹಾಕಿದರು. ಇಷ್ಟಾದರೂ ಸಹ ಅದೇನೂ ಆಕಸ್ಮಿಕ ಘಟನೆ ಎನ್ನುವ ರೀತಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಇತ್ತು.

ಈ ರಾಜ್ಯದ ಗೃಹ ಸಚಿವ ಪರಮೇಶ್ವರ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ಬಗ್ಗೆ ಯಾವುದೇ ಸದಾಭಿಪ್ರಾಯವಿಲ್ಲ. ನಿಷ್ಠುರ ಭಾವನೆ ಇಟ್ಟಕೊಂಡು ನಿಷ್ಠೂರವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೂ ಸಿದ್ದರಾಮಯ್ಯ ಅವರಿಗೆ ಗಣೇಶ ಮೆರವಣಿಗೆ ನಡೆಯೋದು ಇಷ್ಟವಿಲ್ಲ.

ಸಿದ್ದರಾಮಯ್ಯ ‌ಮೊದಲಿನಿಂದಲೂ ಮುಸಲ್ಮಾನರ ಓಲೈಕೆ ಮಾಡ್ತಿದ್ದಾರೆ. ಸಿಎಂ ಅವರೇ ನಿಮಗೆ ಹಿಂದೂಗಳು ಓಟ್ ಹಾಕಿಲ್ವಾ?, 39 ಜನ ವೀರಶೈವ ಸಮಾಜದ ಶಾಸಕರು ನಿಮಗೆ ಬೆಂಬಲ ಕೊಟ್ಟಿಲ್ವಾ? ಆದ್ರೂ ನೀವು‌ ಮಾತೇತ್ತಿದ್ದರೆ ಹಿಂದೂಳಿದವರು ಎಂದು ಮಾತಾಡುತ್ತೀರಿ. ಹಿಂದೂಗಳ ಬಗ್ಗೆ ಧ್ವನಿ ಎತ್ತುವವರನ್ನ ಜಿಲ್ಲೆಗೆ ಬಾರದಂತೆ ನಿಷೇದಾಜ್ಞೆ ಹೊರಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!