ಮಹಿಳೆ ಕೊಂದು ಮೂಟೆಕಟ್ಟಿ ಕಸದ ಲಾರಿಗೆ ಶವ ಎಸೆದ ಪ್ರಕರಣ: ಅಸ್ಸಾಂ ಮೂಲದ ಆರೋಪಿ ಅರೆಸ್ಟ್!

0
Spread the love

ಬೆಂಗಳೂರು:- ನಗರದಲ್ಲಿ ಭೀಕರವಾಗಿ ಮಹಿಳೆ ಕೊಂದು ಮೂಟೆಕಟ್ಟಿ ಕಸದ ಲಾರಿಗೆ ಶವ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ತಮ್ಸುದ್ದಿನ್ ಬಂಧಿತ ಆರೋಪಿ. ಮೃತ ಮಹಿಳೆ ಪುಷ್ಪಾ ಅಲಿಯಾಸ್ ಆಶಾ ಮತ್ತು ಆರೋಪಿ ತಮ್ಸುದ್ದೀನ್‌ ಲಿವ್‌ ಇನ್‌ ರಿಲೇಷನ್‌ನಲ್ಲಿದ್ದರು. ಇಬ್ಬರ ಭಿನ್ನಾಭಿಪ್ರಾಯ ಉಂಟಾಗಿತ್ತು, ಇದೇ ಕೊಲೆಗೆ ಕಾರಣ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಾದ 20 ಗಂಟೆ ಒಳಗಾಗಿಯೇ ಹಂತಕನನ್ನು ಇನ್ಸ್‌ಪೆಕ್ಟರ್‌ ಗಿರೀಶ್ ನಾಯ್ಕ್ ನೇತೃತ್ವದ ತಂಡ ಬಂಧಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಂತಕನನ್ನ ಬಂಧಿಸಲಾಗಿದೆ.

ಏನಿದು ಪ್ರಕರಣ:

ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವಾಪ್ತಿಯಲ್ಲಿ ಮಹಿಳೆಯೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನ ಮೂಟೆ ಕಟ್ಟಿ ಕಸದ ಲಾರಿಯಲ್ಲಿಡಲಾಗಿತ್ತು. ತಡರಾತ್ರಿ ಆಟೋದಲ್ಲಿ ಬಂದ ಹಂತಕ ಬಿಬಿಎಂಪಿ ಲಾರಿಯಲ್ಲಿ ಶವದ ಮೂಟೆ ಎಸೆದು ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here