ಬೆಂಗಳೂರು:- ನಗರದ ಬೆಳ್ಳಂದೂರು ವೃತ್ತದಲ್ಲಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರು ಆಟೋ ಡ್ರೈವರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
Advertisement
ಇತ್ತೀಚೆಗೆ ಆಟೋ ಚಾಲಕ ಹಾಗೂ ಹೊರ ರಾಜ್ಯದ ಮಹಿಳೆ ಪನ್ಪೂರಿ ಮಿಶ್ರಾ ನಡುವೆ ಗಲಾಟೆ ನಡೆದಿತ್ತು. ಸದ್ಯ ಈಗ ಪನ್ಪೂರಿ ಮಿಶ್ರಾ, ಆಕೆಯ ಗಂಡ ಇಬ್ಬರೂ ಸೇರಿ ಆಟೋ ಚಾಲಕ ಹಾಗೂ ಆತನ ಪತ್ನಿಯ ಕಾಲು ಮುಟ್ಟಿ ಕ್ಷಮೆ ಕೇಳಿದ್ದಾರೆ. ಕೈ ಮುಗಿದು ಇನ್ನೊಮ್ಮೆ ಈ ರೀತಿ ಆಗಲ್ಲ ಎಂದು ಗಂಡ ಕೇಳಿಕೊಂಡಿದ್ದಾನೆ. ಇನ್ನು ದರ್ಪ ತೋರಿದ ಮಹಿಳೆ ಮಾತನಾಡಿ, ಕನ್ನಡ, ಕನ್ನಡಿಗರನ್ನ ನಾವು ದ್ವೇಷ ಮಾಡಲ್ಲ. ಐ ಲವ್ ಬೆಂಗಳೂರು. ಇಲ್ಲಿನ ಸಂಸ್ಕೃತಿ ಇಷ್ಟ ಎಂದು ಮಹಿಳೆ ಹೇಳಿದ್ದಾರೆ.