ಬೆಂಗಳೂರು:- ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೇಜವಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.
ನಗರದ ಬಿಟಿಎಂ ಲೇಔಟ್‌ನಲ್ಲಿ ಯುವತಿ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಮತ್ತೊಮ್ಮೆ ಪ್ರಶ್ನೆ ಕೇಳಿದಾಗ, ಆಗ ಗೃಹ ಸಚಿವ ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಬೆಂಗಳೂರು ದೊಡ್ಡ ನಗರ, ಇಂತಹ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ನಡೆಯುತ್ತವೆ ಎಂದಿದ್ದಾರೆ.
ನಿತ್ಯವೂ ಪೊಲೀಸ್ ಕಮೀಷನರ್‌ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಎಂದು ಹೇಳುತ್ತೇನೆ. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಏನು ಆಗುತ್ತಿದೆ ಅದನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಎಂದು ನಿತ್ಯ ಸೂಚನೆ ಕೊಡುತ್ತೇನೆ ಎಂದರು.
ಅಲ್ಲೊಂದು ಇಲ್ಲೊಂದು ಘಟನೆ ಆದಾಗ ಸ್ವಾಭಾವಿಕವಾಗಿ ಜನರ ಮನಸಿನಲ್ಲಿ ಗಮನ ಸೆಳೆಯುತ್ತದೆ. ಅಷ್ಟಕ್ಕೇ ನಾವು ಬಿಡೋದಿಲ್ಲ. ನಿರಂತರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. 24/7 ಮಳೆ, ಚಳಿ ಅನ್ನದೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ಶಾಂತವಾಗಿ ಇದೆ. ಇಷ್ಟು ದೊಡ್ಡ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತೆ. ಅದಕ್ಕೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.