ನವದೆಹಲಿ: ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ದತ್ತಾಂಶವನ್ನು ಅಧಿಕೃತವಾಗಿ ಸೇರಿಸಲಾಗುವುದು ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜಕೀಯ ವ್ಯವಹಾರಗಳ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಮುಂಬರುವ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಬೇಕೆಂದು ಇಂದು ನಿರ್ಧರಿಸಿದೆ. ರಾಜಕೀಯ ಲಾಭಕ್ಕಾಗಿ ಜಾತಿ ಸಮೀಕ್ಷೆಗಳನ್ನು ವಿರೋಧ ಪಕ್ಷಗಳು ಬಳಸುತ್ತಿವೆ ಎಂದು ಆರೋಪಿಸಿದರು.
ಜಾತಿ ಗಣತಿಯಂತಹ ಸಮೀಕ್ಷೆಗಳು ಸಮಾಜದಲ್ಲಿ ಅನುಮಾನಗಳನ್ನು ಸೃಷ್ಟಿಸಿವೆ. ನಮ್ಮ ಸಾಮಾಜಿಕ ರಚನೆಯು ರಾಜಕೀಯದಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು ಸಮೀಕ್ಷೆಗಳ ಬದಲಿಗೆ ಜಾತಿ ಎಣಿಕೆಯನ್ನು ಜನಗಣತಿಯಲ್ಲಿ ಸೇರಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಹಲವಾರು ರಾಜ್ಯಗಳಲ್ಲಿ ನಡೆಸಲಾದ ಜಾತಿ ಜನಗಣತಿ ಕಾರ್ಯವು ಅವೈಜ್ಞಾನಿಕವಾಗಿದೆ ಎಂದು ವೈಷ್ಣವ್ ದೂರಿದರು. ಈ ಸುದ್ದಿಗೋಷ್ಠಿಯಲ್ಲಿ ಪಹಲ್ಗಾಮ್, ಕಾಶ್ಮೀರ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದ ಅಶ್ವಿನಿ ವೈಷ್ಣವ್ ಕ್ಯಾಬಿನೆಟ್ ಸಭೆಯ ಬಗ್ಗೆ ಮಾತ್ರ ಕೇಳಿ ಎಂದು ಪತ್ರಕರ್ತರಿಗೆ ಹೇಳಿದರು.


