ರಾಜ್ಯಾದ್ಯಂತ ಜಾತಿ ಗಣತಿ ಶುರು: ಗದಗ ಜಿಲ್ಲೆಯಲ್ಲಿ ಹಲವೆಡೆ ಸ್ಥಗಿತಗೊಂಡ ಸಮೀಕ್ಷೆ!

0
Spread the love

ಗದಗ: ಎಡವಟ್ಟು, ಗೊಂದಲದ ಮಧ್ಯೆಯೇ ಕರ್ನಾಟಕದಲ್ಲಿ  ಶುರುವಾಗಿರುವ ಜಾತಿ ಗಣಪತಿಗೆ ಹಲವೆಡೆ ವಿಘ್ನ ಎದುರಾಗಿದೆ. ಬಹುತೇಕ ಕಡೆ ನಿರ್ವಿಘ್ನವಾಗಿ ಜಾತಿಗಣತಿ ಶುರುವಾಗಿದೆ. ಆದರೆ ಹಲವೆಡೆ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಹೌದು ಗದಗ ಜಿಲ್ಲೆಯ ಹಲವಡೆ ಸರ್ವರ್‌ ಸಮಸ್ಯೆಯಿಂದ ಜಾತಿಗಣತಿ ಸಮೀಕ್ಷೆ ಸ್ಥಗಿತಗೊಂಡಿದೆ.

Advertisement

ಆ್ಯಪ್ ಸರಿಯಾಗಿ‌ ಓಪನ್ ಆಗದೇ ಶಿಕ್ಷಕರು ಪರದಾಡುತ್ತಿದ್ದು, ಸಮೀಕ್ಷೆ ಅರ್ಥಕ್ಕೆ‌ ಮೊಟಕುಗೊಳಿಸಿ ಶಿಕ್ಷಕರು ತಹಸೀಲ್ದಾರ್ ಕಚೇರಿಗೆ ದೌಡಾಯಿಸಿದ್ದಾರೆ. ಬಿಸಿಎಂ ಜಿಲ್ಲಾಧಿಕಾರಿ ಮಹೆಬೂಬ್ ತುಂಬರಮಟ್ಟಿಗೆ ಸಮಸ್ಯೆ ಹೇಳಿಕೊಂಡಿದ್ದಾರೆ. ಒಂದು ಕುಟುಂಬ ಗಣತಿ ಮಾಡಲು ಒಂದರಿಂದ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು,

ಸಮಯ ವ್ಯರ್ಥದ ಬಗ್ಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗಣತಿ ಮಾಡಲು ಸಹಕರಿಸುತಿಲ್ಲ ಅಂತ ಆರೋಪ ಮಾಡಿದ್ದಾರೆ. 40 ಪ್ರಶ್ನೆಗಳು‌ ಭರ್ತಿ ಮಾಡಿ ಸಲ್ಲಿಕೆ ಮಾಡುವಾಗ ಎರರ್‌ ಅಂತಾ ಬರ್ತಿದ್ದು, ಪ್ರತಿ ಎಂಟ್ರಿಗೂ ಅದೇ ಸಮಸ್ಯೆ ಕಾಡುತ್ತಿದೆ ಎಂದು ಗಣತಿದಾರರು ಅಸಮಾಧಾನ ಹೇಳಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here