HomeKarnataka Newsಮುಡಾ ಹಗರಣ ಡೈವರ್ಟ್ ಮಾಡಲು ಜಾತಿಗಣತಿ ತಂದಿದ್ದಾರೆ: ಕಾಂಗ್ರೆಸ್ ವಿರುದ್ಧ ಶೆಟ್ಟರ್ ಕಿಡಿ!

ಮುಡಾ ಹಗರಣ ಡೈವರ್ಟ್ ಮಾಡಲು ಜಾತಿಗಣತಿ ತಂದಿದ್ದಾರೆ: ಕಾಂಗ್ರೆಸ್ ವಿರುದ್ಧ ಶೆಟ್ಟರ್ ಕಿಡಿ!

For Dai;y Updates Join Our whatsapp Group

Spread the love

ಗದಗ:- ಸರ್ಕಾರ ಬಿದ್ರು ಪರವಾಗಿಲ್ಲ ಜಾತಿಗಣತಿ ಬಿಡುಗಡೆ ಮಾಡಲಿ ಎಂಬ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಗದಗನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ ಹರಿಪ್ರಸಾದ್ ಸಿಟ್ಟು ಇದೆ. ಹೆಂಗಾದ್ರು ಅವರನ್ನ ಕೆಳಗೆ ಇಳಿಸೋಣ ಅಂತ ಪ್ಲಾನ್ ಮಾಡಿರಬಹುದು. ಹರಿಪ್ರಸಾದ್ ಅವರನ್ನ ಮಂತ್ರಿ ಮಾಡಲಿಲ್ಲ ಆ ಕಾರಣಕ್ಕೆ ಭಯಂಕರ ಸಿಟ್ಟು ಇದೆ. ಸಿದ್ದರಾಮಯ್ಯ ಅವರು ರಾಜಿ ಮಾಡಿಕೊಂಡಿಲ್ಲ. ಈ ನೆಪದ ಮೇಲಾದ್ರು ಸಿದ್ದರಾಮಯ್ಯನ ಮನೆಗೆ ಕಳುಹಿಸುವ ತಂತ್ರ ಹರಿ ಪ್ರಸಾದ್ ಮಾಡಿದ್ದಾರೆ ಎಂದರು.

ಜಾತಿಗಣತಿ ಆಗುವುದರ ಬಗ್ಗೆ ಎಲ್ಲರೂ ಒಪ್ಪಿಕೊಂಡಿದ್ದಾರೆ. 10 ವರ್ಷಕ್ಕೊಮ್ಮೆ ಜನಗಣತಿ ಆಗಬೇಕಲ್ಲ. ಅದ್ರಲ್ಲಿ ಜಾತಿಗಣತಿ ಆಗಬೇಕು. RSS ಇದನ್ನೇ ಹೇಳಿದೆ. ಜಾತಿವಾರು ಜನಗಣತಿ ಮಾಡಿದ್ರು ಸರಿ ಇದೆ. ಜಾತಿಗಣತಿ ಮಾಡಬೇಕು ಬಿಡಬೇಕು ಅನ್ನೋ ಪ್ರಶ್ನೆ ಇಲ್ಲ. ಈ ಹಿಂದೆ ಹಿಂದುಳಿದ ಆಯೋಗ ಕಾಂತ ರಾಜು ಅವರನ್ನು ನೇಮಿಸಿದ್ರು.

ಕಾಂತರಾಜು ವರದಿ ಬಂದ ಮೇಲೆ ತೆಗೆದುಕೊಳ್ಳಲಿಲ್ಲ. ಒತ್ತಾಯ ಪೂರ್ವಕವಾಗಿ ತಗೆದುಕೊಂಡಿದ್ದಾರೆ. ಸಿಎಂ ಅವರು ಕ್ರಮ ತಗೆದುಕೊಳ್ಳಬೇಕಲ್ಲ. ಬೇಡ ಅಂತಾ ರಿಜಕ್ಟ್ ಆದ್ರು ಮಾಡಬೇಕಲ್ಲ. ಜಾತಿಗಣತಿ ಬಿಡುಗಡೆ ಮಾಡದೆ ಎಲ್ಲವು ಅತಂತ್ರ ಮಾಡಿದ್ದಾರೆ. ಜಾತಿಗಣತಿ ವಿಚಾರವಾಗಿ ಡಿಬೇಟ್ ಮಾಡ್ತಾರೆ.

ಮುಡಾ ಹಗರಣ ಮುಚ್ಚಿಹಾಕಲು ಜಾತಿಗಣತಿ ತಂದಿದ್ದಾರೆ. ಜನ್ರ ಮನಸ್ಸು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಹಾಗಾದ್ರೆ ಕಾಂತರಾಜು ವರದಿ ಒಪ್ಪಿಕೊಳ್ಳಿ ಎಂದರು.

ಇನ್ನೂ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಜಾತಿಗಣತಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಪ್ರಣಾಳಿಕೆಯಲ್ಲಿದ್ರು ಯಾಕೆ ಬಿಡುಗಡೆ ಮಾಡಲಿಲ್ಲ. ಸಿಎಂ ಅವರಿಗೆ ಜಾತಿಗಣತಿ ಬಿಡುಗಡೆ ಮಾಡುವ ಮನಸ್ಸು ಇಲ್ಲ ಎಂದು ಈ ವೇಳೆ ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!