ಬೆಂಗಳೂರು: ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಪಕ್ಷ ಹೇಳಿದಂತೆ ಅನುಷ್ಠಾನ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿಯನ್ನು ಕಾಂಗ್ರೆಸ್ ಪಕ್ಷ ಹೇಳಿದಂತೆ ಅನುಷ್ಠಾನ ಮಾಡಲೇಬೇಕು.
ಸರ್ಕಾರ ಇದನ್ನು ಮಾಡಲೇಬೇಕು, ಹಲವು ಮಸೂದೆಗಳನ್ನು ಕೂಡ ವಾಪಸ್ ಪಡೆಯಬೇಕಿದೆ. ಕೇವಲ ಗ್ಯಾರಂಟಿಗಳ ಮಧ್ಯ ಮುಳಗಿದ್ದೇವೆ. ಇವುಗಳನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿ, ಉದಯಪುರದಲ್ಲಿ ನಿರ್ಣಯ ಮಾಡಲಾಗಿದೆ. ಒಬ್ಬರಿಗೆ ಒಂದೆ ಹುದ್ದೆ ಅಂತ ನಿಯಮ ಆಗಿದೆ. ಇದರ ಮೇಲೆ ಅವರು ಬೇಡಿಕೆ ಇಡ್ತಾ ಇದ್ದಾರೆ ಅನಿಸುತ್ತೆ. ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಿತ್ತು. ಮೊನ್ನೆ ನಡೆದ ಸಿಎಲ್‌ಪಿ ಸಭೆಯಲ್ಲಿ ಚರ್ಚೆ ಆಗಬೇಕಿತ್ತು. ಬಹಿರಂಗವಾಗಿ ಮಾತನಾಡುವುದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಹೇಳಿದರು.