ಬೆಂಗಳೂರು: ಜಾತಿಗಣತಿ ಮೂಲ ಪ್ರತಿ ನಾಪತ್ತೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂತರಾಜ ವರದಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಏಕಾಏಕಿ ಮಾಡಿದ್ದಾರೆ. ಇದು ಹತ್ತು ವರ್ಷದ ಹಳೆಯ ವರದಿಯಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದೆ, ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂತರಾಜು ವರದಿಯಲ್ಲಿ ಸೆಕ್ರೆಟರಿ ಸಹಿ ಹಾಕಬೇಕು. ನಮ್ಮಅವಧಿಯಲ್ಲಿ ಸಹಿ ಹಾಕಲೇ ಇಲ್ಲ, ಈಗ ಕಾಂತರಾಜು ವರದಿಯ ಮೂಲ ಪ್ರತಿಯೇ ಕಾಣೆಯಾಗಿದೆ.
168 ಕೋಟಿ ಸರ್ಕಾರದ ಹಣ ಖರ್ಚು ಮಾಡಿ ವರದಿ ಕಾಣೆಯಾಗಿದೆ ಅಂದ್ರೆ ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ? ಕಾಣೆಯಾಗಿರುವ ಬಗ್ಗೆ ಏನೂ ಮಾತನಾಡುತ್ತಿಲ್ಲ, ಇದನ್ನ ನಾನು ಖಂಡಿಸುತ್ತೇನೆ. ಯಾರು ಖದ್ದಿದ್ದಾರೆ ಎಂಬುದರ ವಿಚಾರವಾಗಿ ತನಿಖೆ ಆಗಲೇಬೇಕು. ಸರಿಯಾದ ಮಾನದಂಡವಾಗಿ ಸಮಿಕ್ಷೆ ಮಾಡಬೇಕು. ಅತೀ ಆತುರ, ಓವರ್ ಆಕ್ಷನ್ ಆಗಿ ಸಿದ್ದರಾಮಯ್ಯ ವರದಿ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎಂದರು.