ಉತ್ತರ ಕನ್ನಡ:-ಜಿಲ್ಲೆಯ ಶಿರಸಿ ತಾಲೂಕಿನ ಬಿಳಗೇರಿ–ಸುರಗುಪ್ಪ ಗ್ರಾಮದಲ್ಲಿ ಜನವರಿ 9ರ ರಾತ್ರಿ ನಡೆದಿದ್ದ ಜಾನುವಾರು ಕಳ್ಳತನ ಪ್ರಕರಣವನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ಈ ಸಂಬಂಧ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮೂಲದ 6 ಮಂದಿ ಅಂತರ ಜಿಲ್ಲಾ ಜಾನುವಾರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಿರೂರು ಗ್ರಾಮದ ಗೊಲ್ಲರ ಬಿಡಾರದ
ಮೋಹನ ಶೇಖಪ್ಪ ಗೊಲ್ಲರ (25),ಬಸವರಾಜ ಅಮ್ಮಣಪ್ಪ ಗೊಲ್ಲರ (35), ಅವಿನಾಶ @ ಅಭಿಲಾಷ ರುದ್ದಪ್ಪ ಗೊಲ್ಲರ (22), ಸುರೇಶ ಫಕೀರಪ್ಪ ಗೊಲ್ಲರ, ಕೊಪ್ಪರಶಿಕೊಪ್ಪ (35), ಬಸವರಾಜ ಫಕೀರಪ್ಪ ಗೊಲ್ಲರ (47), ಮತ್ತು ಅಯೂಬ ಅನೀಮ್ ಸಾಬ (54) ಎಂದು ಗುರುತಿಸಲಾಗಿದೆ.
ಜನವರಿ 9ರ ರಾತ್ರಿ ರಾಮಚಂದ್ರ ಗೌಡ ಹಾಗೂ ಅವರ ಸಹೋದರರ ಹೊಲದಲ್ಲಿದ್ದ ಕೊಟ್ಟಿಗೆಯಿಂದ 3 ಹಸುಗಳು ಮತ್ತು 4 ಎತ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಬಂಧಿತರಿಂದ ಮೂರು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದು, ಕೃತ್ಯಕ್ಕೆ ಬಳಸಿದ್ದ ಸುಮಾರು ₹3 ಲಕ್ಷ ಮೌಲ್ಯದ ಪಿಕ್‌ಅಪ್ ವಾಹನ ಹಾಗೂ ಒಂದು ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಅಂತರ ಜಿಲ್ಲಾ ಮಟ್ಟದಲ್ಲಿ ಜಾನುವಾರು ಕಳ್ಳತನ ನಡೆಸುತ್ತಿದ್ದ ಈ ಗ್ಯಾಂಗ್‌ನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.



