ಯಾವುದೇ ಅಡುಗೆ ಮಾಡಲು ಎಣ್ಣೆ ಬೇಕೇ ಬೇಕು. ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಎಣ್ಣೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಎಣ್ಣೆ ಬಳಸದೇ ರುಚಿಕರವಾದ ಅಡುಗೆ ಮಾಡಲು ಎಂದಿಗೂ ಯಾರಿಂದಲೂ ಕೂಡ ಸಾಧ್ಯವೇ ಇಲ್ಲ ಎಂದೇ ಹೇಳಬಹುದು.
ಅಡುಗೆಗೆ ನಾವು ಬಳಸುವ ಕೆಲವು ಎಣ್ಣೆಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಅದರಲ್ಲೂ ಇತ್ತೀಚಿಗೆ ಅಧ್ಯಯನವೊಂದು ನಾವು ಬಳಸುವ ಈ ಎಣ್ಣೆ ನಮ್ಮನ್ನು ಕ್ಯಾನ್ಸರ್ ಸುಳಿಯಲ್ಲಿ ಸಿಲುಕಿಸಬಹುದು ಎಂಬ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ. ಹಾಗಾದ್ರೆ ಅದು ಯಾವ ಎಣ್ಣೆ ಅಂತೀರಾ ಈ ಸ್ಟೋರಿ ಓದಿ.
ಸೂರ್ಯಕಾಂತಿ ಬೀಜಗಳು, ದ್ರಾಕ್ಷಿ ಬೀಜಗಳು ಮತ್ತು ಕ್ಯಾನೋಲಾ ಕಾರ್ನ್ ಬೀಜಗಳಿಂದ ತಯಾರಿಸಲಾದ ಎಣ್ಣೆಗಳ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯಕೀಯ ಜರ್ನಲ್ ಗಟ್ನಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ.
ಬೀಜದ ಎಣ್ಣೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವೇನು?: ಈ ಸಂಶೋಧನೆಯಲ್ಲಿ 80 ಕೊಲೊನ್ ಕ್ಯಾನ್ಸರ್ ರೋಗಿಗಳ ಮೇಲೆ ಅಧ್ಯಯನ ನಡೆಸಲಾಯಿತು ಮತ್ತು ಜೈವಿಕ ಸಕ್ರಿಯ ಲಿಪಿಡ್‌ಗಳನ್ನು ಹೆಚ್ಚಿಸಿರುವುದು ಕಂಡು ಬಂದಿತು. 30 ರಿಂದ 85 ವರ್ಷ ವಯಸ್ಸಿನವರಿಂದ 81 ಗೆಡ್ಡೆಯ ಮಾದರಿಗಳ ಲಿಪಿಡ್‌ಗಳು ಕ್ಯಾನ್ಸರ್ ಅಂಗಾಂಶದಲ್ಲಿ ಹೆಚ್ಚಿರುವುದು ಕಂಡು ಬಂದಿದೆ. ಇದು ಬೀಜಗಳಿಂದ ತಯಾರಿಸಿದ ಎಣ್ಣೆಗಳ ಸೇವನೆಯಿಂದ ಉಂಟಾಗಿರುವುದು ತಿಳಿದುಬಂದಿದೆ.
ಬೀಜದ ಎಣ್ಣೆಗಳ ಇತಿಹಾಸ: ಬೀಜಗಳಿಂದ ತಯಾರಿಸಿದ ಎಣ್ಣೆಗಳನ್ನು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು 1900ರ ದಶಕದಲ್ಲಿ ಮೇಣದಬತ್ತಿ ತಯಾರಕ ವಿಲಿಯಂ ಪ್ರಾಕ್ಟರ್ ಅವರು ಪ್ರಾಣಿಗಳ ಕೊಬ್ಬುಗಳಿಗೆ ಪರ್ಯಾಯವಾಗಿ ಸೋಪ್ ತಯಾರಿಸಲು ಅಭಿವೃದ್ಧಿಪಡಿಸಿದರು. ಕ್ರಮೇಣ ಈ ತೈಲಗಳು ಅಮೇರಿಕನ್ ಆಹಾರದ ಪ್ರಮುಖ ಭಾಗವಾಯಿತು.
ಕ್ಯಾನ್ಸರ್, ಸೀಡ್ ಆಯಿಲ್ಸ್ ಸೈನ್ಸ್: ಹೊಸ ಅಧ್ಯಯನದ ಪ್ರಕಾರ, ಬೀಜದ ಎಣ್ಣೆಗಳ ಹೆಚ್ಚಿನ ಸೇವನೆಯು ದೇಹದಲ್ಲಿ ದೀರ್ಘಕಾಲದ ಉರಿಯೂತವನ್ನು ಉತ್ತೇಜಿಸುತ್ತದೆ, ಇದು ಕ್ಯಾನ್ಸರ್ ಬೆಳವಣಿಗೆ ಮತ್ತು ಹರಡುವಿಕೆಯಲ್ಲಿ ಪಾತ್ರವನ್ನು ವಹಿಸುತ್ತದೆ.
ಕೊಲೊರೆಕ್ಟಲ್ ಕ್ಯಾನ್ಸರ್ ಗೆಡ್ಡೆಗಳ ಲಿಪಿಡ್ ಪ್ರೊಫೈಲ್ ಇವು ಬಲವಾದ ಉರಿಯೂತವನ್ನು ಉಂಟು ಮಾಡುತ್ತದೆ ಎಂದು ತಿಳಿಸಿದೆ. ಈ ಕಾರಣದಿಂದಾಗಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವ ದೇಹದ ನೈಸರ್ಗಿಕ ಪ್ರತಿರೋಧ ಗುಣಲಕ್ಷಣಗಳು ಈ ಗೆಡ್ಡೆಗಳಲ್ಲಿ ಕಡಿಮೆ ಇರುವುದು ಕಂಡುಬಂದಿದೆ.
ದೇಹದಲ್ಲಿ ಉರಿಯೂತವನ್ನು ಸಮತೋಲನಗೊಳಿಸುವುದು ಈ ವೈದ್ಯಕೀಯ ವಿಧಾನದ ಗುರಿಯಾಗಿದೆ. ರೆಸಲ್ವಿನ್‌ಗಳಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೂಲಕ ದೀರ್ಘಕಾಲದ ಉರಿಯೂತ ಸಮಸ್ಯೆಯನ್ನು ಪರಿಹರಿಸಬಹುದು.
ಈ ತಂತ್ರಜ್ಞಾನವು ಕ್ಯಾನ್ಸರ್‌ನಂತಹ ಉರಿಯೂತ-ಆಧಾರಿತ ಕಾಯಿಲೆಗಳಿಗೆ ಹೊಸ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆದ್ದರಿಂದ, ಬೀಜದ ಎಣ್ಣೆಗಳ ಅತಿಯಾದ ಸೇವನೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬ ಆವಿಷ್ಕಾರ ಬಯಲಿಗೆ ಬಂದಿದೆ.