ವಿಜಯಸಾಕ್ಷಿ ಸುದ್ದಿ, ಗದಗ : ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಬಿಎಸ್‌ಇ ಶಾಲೆಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶವನ್ನು ಪಡೆದಿದೆ.
ಶೈಕ್ಷಣಿಕ ವರ್ಷದಲ್ಲಿ ಅನೇಕ ಶೈಕ್ಷಣಿಕ ಚಟುವಟಿಕೆ, ಸರಣಿ ಪರೀಕ್ಷೆ, ವಿಶೇಷ ತರಗತಿಗಳೊಂದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದ ಪ್ರಯುಕ್ತ ಈ ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ 86 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ಸ್ಥಾನ ಪಡೆದಿದ್ದು, 62 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 9 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಆದಿತ್ಯ ಕಮತರ ಶೇ. 93.4 ಅಂಕಗಳೊಂದಿಗೆ ಪ್ರಥಮ, ಸುಮನ್ ಶಿವಪ್ಪಯ್ಯನಮಠ ಶೇ. 93.2 ಅಂಕಗಳೊಂದಿಗೆ ದ್ವಿತೀಯ, ಪ್ರಿಯಾಂಕ ಹುಚ್ಚಯ್ಯನಮಠ ಶೇ. 91.8 ಅಂಕಗಳೊಂದಿಗೆ ತೃತೀಯ, ಶೀಫಾ ತಹಸೀಲ್ದಾರ್ ಶೇ. 90.6, ಐಶ್ವರ್ಯ ಗೋಸಗೊಂಡಿ ಶೇ. 90.4, ಓಂ ಸುನೀಲ ಬಾಂಡಗೆ ಶೇ. 89.4, ಅನಿಲ ಕುಮಾರ್ ಲಮಾಣಿ ಮತ್ತು ಅರ್ಪಿತಾ ಲಮಾಣಿ ಶೇ. 89, ಸೃಷ್ಟಿ ಉಪ್ಪಾರ ಶೇ. 88.9, ಮಹಾಂತೇಶ ಕಮತರ ಮತ್ತು ಪವಿತ್ರಾ ಹಳ್ಳಿ ಶೇ. 87.8, ಸ್ಪೂರ್ತಿ ಗಿರಿಯಪ್ಪಗೌಡರ ಶೇ. 86.8, ದೀಕ್ಷಾ ಬಂಡಿ ಶೇ. 85.2, ಅಮೃತ ಕೊರವರ್ ಶೇ. 85 ಅಂಕ ಗಳಿಸಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷರಾದ ಜ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.