ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕಾಮಗಾರಿಗಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ದೇವೇಂದ್ರಪ್ಪ ತಿಳಿಸಿದರು.
Advertisement
ತಾಲೂಕಿನ ಅರಸೀಕೆರೆ ಹೋಬಳಿಯ ಕುರೇಮಾಗನಹಳ್ಳಿ ಗ್ರಾಮದಲ್ಲಿ 82 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಹಾಗೂ ಯರಬಳ್ಳಿ ಗ್ರಾಮದಲ್ಲಿ 60 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಇಇ ಪ್ರಕಾಶ್ ಪಾಟೀಲ್, ಕಾಂಗ್ರೆಸ್ ಮುಖಂಡ ಕಮ್ಮತ್ತಹಳ್ಳಿ ಮಂಜುನಾಥ, ಟಿ. ಮಂಜಪ್ಪ, ಯಶವಂತ ಗೌಡ, ಮಹಂತೇಶ್ ನಾಯ್ಕ, ಉಮಾಪತಿ, ಗಂಗಮ್ಮ ಪರುಸಪ್ಪ, ರಾಮನಗೌಡ, ಸಲಾಂ ಸಾಬ್, ಚನ್ನಬಸಪ್ಪ, ಮಹೇಶಪ್ಪ, ಶಿವಣ್ಣ, ಗುರುಸಿದ್ದನಗೌಡ, ಸುರೇಶ್, ವಿಜಯ್ ಕುಮಾರ್, ಶೆಟ್ಟಿ ನಾಯ್ಕ ಇತರರಿದ್ದರು.