ಕೊಲೆ ಕೇಸ್‌ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ನಿರ್ದೇಶಕನ ವಶಕ್ಕೆ ಪಡೆದ CCB!

0
Spread the love

ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿ ಕೊಲೆ ಕೇಸ್‌ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ‌ ನಿರ್ದೇಶಕನನ್ನ ಅರೆಸ್ಟ್ ಮಾಡಿದೆ.

Advertisement

ಸಿನಿ ನಿರ್ದೇಶಕ ಗಜೇಂದ್ರ @ ಗಜ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪೊಲೀಸರ ಕೈಗೆ ಸಿಗದೇ ಗಜೇಂದ್ರ ಒಡಾಡಿಕೊಂಡಿದ್ದ. 2004 ರಲ್ಲಿ ನಡೆದಿದ್ದ ವಿಲ್ಸನ್ ಗಾರ್ಡನ್‌ನಲ್ಲಿ ರೌಡಿ ಶೀಟರ್ ಕೊತ್ತರವಿ ಮರ್ಡರ್ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆರೋಪಿ ಆಗಿದ್ದ.

ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರ್ಲಿಲ್ಲ. ಅರಸಯ್ಯನ ಶಿಷ್ಯ ಗಜೇಂದ್ರ@ ಗಜ ಪುಟಣಿಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿದ್ದನಾಂತೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಗಜ ಹೇಳಿಕೊಂಡಿದ್ದ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here