ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೊಲೀಸರ ಕಾರ್ಯಚರಣೆ ನಡೆಸಿ ಆರು ಅಂತರರಾಜ್ಯ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ. ಕಾಲೇಜು ಯುವಕರು, ಸ್ಟಾಫ್ ವೇರ್ ಉದ್ಯೋಗಿಗಳನ್ನೆ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು.
Advertisement
ಮಧ್ಯವರ್ತಿಗಳ ಮುಖಾಂತರ ಕೇರಳದಿಂದ ಬೆಂಗಳೂರಿಗೆ ಮಾದಕ ವಸ್ತು ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ, ಸಂಪಿಗೆಹಳ್ಳಿ, ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಇನ್ನೂ ಬಂಧಿತ ಆರೋಪಿಗಳಿಂದ 23 ಲಕ್ಷದ 3 kg ಗಾಂಜಾ, ಹೈಡ್ರೋ ಗಾಂಜಾ, ಇ ಸಿಗರೇಟ್ ಜಪ್ತಿ ಮಾಡಲಾಗಿದೆ. ಬ್ಯಾಡರಹಳ್ಳಿ ಸಂಪಿಗೇಹಳ್ಳಿ, ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.