ಬೆಂಗಳೂರು: ಸಿಸಿಬಿ ಪೊಲೀಸ್ರು ಇಂದು ಕೆಲ ರೌಡಿ ಶೀಟರ್ ಗಳಿಗೆ ಶಾಕ್ ನೀಡಿದ್ದಾರೆ. ಅದ್ರಲ್ಲೂ ಮಿಟರ್ ಬಡ್ಡಿ, ಲಿಟಿಗೇಷನ್ ಪ್ರಾಪರ್ಟಿ ಡೀಲಿಂಗ್ ಮಾಡ್ತಿದ್ದ ರೌಡಿಗಳಿಸಿಗೆ ಸಿಸಿಬಿ ಶಾಕ್ ನೀಡಿದೆ. ಅನ್ನಪೂರ್ಣೇಶ್ವರಿ ನಗರದ ರೌಡಿ ಶೀಟರ್ ಅನಿಲ್ ಕುಮಾರ್ @ ಬೋರ್ ವೆಲ್ ಅನಿಲ, ಯಶವಂತಪುರ ರೌಡಿ ಶೀಟರ್ ಗಿರೀಶ @ ರಾಬರಿ ಗಿರಿ,ಸೋಲದೇವನಹಳ್ಳಿ ರೌಡಿ ಶೀಟರ್ ತಿಮ್ಮ, ವಿವೇಕನಗರ ರೌಡಿ ಶೀಟರ್ ಗಳಾದ ನಾರಾಯಣ, ಹೇಮಂತ್ @ ನಿರ್ಮಲ್ ಮತ್ತು ರಾಮು ಮನೆ ಮೇಲೆ ಸಿಸಿಬಿ ಪೊಲೀಸ್ರು ದಾಳಿ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ರೌಡಿ ಅನಿಲನ. ಲಿಟಿಗೇಷನ್ ಪ್ರಾಪರ್ಟಿ ಡೀಲಿಂಗ್ ನಲ್ಲಿ ಸಾಕಷ್ಟು ಅಮಾಯಕರಿಗೆ ತೊಂದರೆ ಕೊಟ್ಟಿರೋದಾಗಿ ದೂರಿ ಕೇಳಿ ಬಂದಿತ್ತು. ಈ ದೂರುಗಳ ಹಿನ್ನೆಲೆ ಸಿಸಿಬಿ ದಾಳಿ ನಡೆಸಿದ್ದು, ಅನಿಲ ಮನೆಯಲ್ಲಿ ಲಿಟಿಗೇಷನ್ ಪ್ರಾಪರ್ಟಿ ಸಂಬಂಧಿಸಿದ ಆಸ್ತಿಪತ್ರಗಳು ಹಲವು ಚೆಕ್ ಗಳು ಪತ್ತೆಯಾಗಿದೆ.
ಅಮಾಯಕರಿಗೆ ಬೆದರಿಸಿ ಹಲವು ನಿವೇಶನಗಳ ಅನಿಲ ಕಬಳಸಿರೋ ದೂರುಗಳು ಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರದ ಶಂಕೆ ಕೂಡ ವ್ಯಕ್ತವಾಗಿದ್ದು, ಸದ್ಯ ಅನಿಲನ ಮನೆಯಲ್ಲಿ ಸಿಕ್ಕ ದಾಖಲಾತಿಗಳನ್ನ ಸಿಸಿಬಿ ಅಧಿಕಾರಿಳು ಪರಿಶೀಲನೆ ನಡೆಸುತ್ತಿದ್ದಾರೆ.
ಅನಿಲನ ಜೊತೆಗೆ ಉಳಿದ ರೌಡಿ ಶೀಟರ್ ಮನೆಯಲ್ಲಿ ಕೆಲವೊಂದು ದಾಖಲೆ ಪತ್ತೆಯಾಗಿದ್ದು ರೌಡಿಗಳಿಸಿಗೆ ಸಿಸಿಬಿ ವಿಚಾರಣೆ ಮುಂದುವರಿದೆ. ರೌಡಿ ಶೀಟರ್ ಜೊತೆಗೆ ಮೀಟರ್ ಬಡ್ಡಿ ನಡೆಸ್ತಿದ್ದವನ ಮನೆ ಮೇಲೂ ದಾಳಿ ನಡೆದಿದ್ದು ಶಿವಾನಂದ ಸರ್ಕಲ್ ಬಳಿ ಇರೋ ಕೃಷ್ಣೇಗೌಡ ಅನ್ನೋ ಉದ್ಯಮಿ ಕಚೇರಿ ಮೇಲೆ ದಾಳಿ ನಡೆದಿದೆ. ದಿನದ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸ್ತಿದ್ದ ಕೃಷ್ಣೇಗೌಡನ ಕಚೇರಿಯಲ್ಲಿ ಅಗ್ರಿಮೆಂಟ್ ಪೇಪರ್, ಚೆಕ್ ಗಳು ಪತ್ತೆಯಾಗಿವೆ.