ಸ್ಯಾಂಡಲ್‌ ವುಡ್‌ʼನ ಮತ್ತಿಬ್ಬರು ನಟಿಯರಿಗೆ ಶಾಕ್‌ ನೀಡಿದ CCB..!

0
Spread the love

ಬೆಂಗಳೂರು: ದುಬೈನಿಂದ ಚಿನ್ನ ತಂದು ಡಿಆರ್​ಐ ಕೈಗೆ ಲಾಕ್ ಆಗಿರುವ ಸ್ಯಾಂಡಲ್​ವುಡ್ ನಟಿ ರನ್ಯಾ ರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಸ್ತಿರುವ ಅಧಿಕಾರಿಗಳು, ಒಂದೊಂದೇ ಮಾಹಿತಿಯನ್ನು ಆಚೆ ತರಲು ಪ್ರಯತ್ನಿಸ್ತಿದ್ದಾರೆ.

Advertisement

ಇದರ ಬೆನ್ನಲ್ಲೇ  ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ವಿರುದ್ಧದ ಎಫ್​ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸಿಸಿಬಿ ಮೇಲ್ಮನವಿ ಸಲ್ಲಿಸುವ ಮೂಲಕ ಶಾಕ್‌ ನೀಡಿದೆ. ಡ್ರಗ್ಸ್ ಕೇಸ್​ನಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್​ಐಆರ್ ರದ್ದುಗೊಳಿಸುವಂತೆ ನಟಿಯರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್​, ನಟಿಯರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಮಾಡಿತ್ತು. ಇದರಿಂದ ಪ್ರಕರಣದ ತನಿಖೆ ನಡೆಸ್ತಿದ್ದ ಸಿಸಿಬಿ ಅಧಿಕಾರಿಗಳಿಗೆ ಹಿನ್ನಡೆ ಆಗಿತ್ತು. ಅದಕ್ಕೆ ಸಿಸಿಬಿ ಅಧಿಕಾರಿಗಳು, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದರು.

ಸುಪ್ರೀಂ ಕೋರ್ಟ್​​ಗೆ ಹೋಗಲು ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿಯನ್ನು ಸಿಸಿಬಿ ಕೇಳಿತ್ತು. ಕಾನೂನು ಇಲಾಖೆಯು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅಸ್ತು ಎಂದಿತ್ತು. ಇದೀಗ ಗೃಹ ಇಲಾಖೆ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಿಸಿಬಿ ಮೇಲ್ಮನವಿ ಸಲ್ಲಿಸಿದೆ.

 


Spread the love

LEAVE A REPLY

Please enter your comment!
Please enter your name here