ಬೆಂಗಳೂರು:-ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಕರ್ನಾಟಕದ ಎಲ್ಲಾ ದೇವಸ್ಥಾನದ ದಾಸ್ತಾನು ಗೃಹದಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬನ್ನ ಬಳಕೆ ಮಾಡಲಾಗಿದೆ ಎಂಬ ಆರೋಪ ಸಾಕಷ್ಟು ಸಂಚಲನ ಮೂಡಿಸಿತ್ತು. ಅನ್ಯ ರಾಜ್ಯಗಳಲ್ಲೂ ದೇವಸ್ಥಾನ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಒಂದಷ್ಟು ನಿಯಮಗಳನ್ನು ಜರುಗಿಸಲಾಗಿತ್ತು. ಇದೀಗ ನಮ್ಮ ರಾಜ್ಯದಲ್ಲಿ ಮುಜುರಾಯಿ ಇಲಾಖೆ ಫುಲ್ ಸ್ಟ್ರೀಕ್ಟ್ ಮಾಡಲು ಮುಂದಾಗಿದ್ದು, ಪ್ರಸಾದ ವಿತರಿಸುವ ಹಾಗೂ ತಯಾರಿಸುವ ಜಾಗದಲ್ಲಿ ಸಿಸಿಟಿವಿ ಕ್ಯಾಮರಾವನ್ನ ಅಳವಡಿಕೆ ಕಡ್ಡಾಯ ಮಾಡಿದೆ.
ಲಡ್ಡು ವಿವಾದದ ಬಳಿಕ ಭಕ್ತಾದಿಗಳಲ್ಲಿ ಪ್ರಸಾದದ ಕುರಿತಾಗಿ ಅನುಮಾನಗಳು ಬರುವುದಕ್ಕೆ ಶುರುವಾಗಿತ್ತು. ಹೀಗಾಗಿ ಇವುಗಳಿಗೆ ತೆರೆ ಎಳೆಯುವ ಸಲುವಾಗಿ ಮುಜರಾಯಿ ಇಲಾಖೆ ದೇವಸ್ಥಾನಗಳ ದಾಸ್ತಾನು ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನ ಕಡ್ಡಾಯ ಮಾಡಲಾಗಿದೆ.
ಇಷ್ಟು ದಿನಗಳ ಕಾಲ ಎ ವರ್ಗದ ದೇವಸ್ಥಾನಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮರಾ ಅಳಡಿಸಲಾಗಿತ್ತು. ಆದರೆ ಇನ್ನು ಮುಂದೆ ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿಯೂ ಅಡುಗೆ ತಯಾರಿಕಾ ಜಾಗದಲ್ಲಿ ಸಿಸಿಟಿವಿ ಕಡ್ಡಾಯ ಮಾಡಿದ್ದು, ನಿಯಮ ಉಲ್ಲಂಘಿಸದಂತೆ ಇಲಾಖೆಯಿಂದ ತಾಖೀತು ಮಾಡಲಾಗಿದೆ.