ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗಗನಯಾತ್ರಿಗಳು ಸುರಕ್ಷಿತವಾಗಿ ಭೂತಾಯಿಯ ಮಡಿಲಿಗೆ ಆಗಮಿಸಿದ್ದಕ್ಕೆ ಪಟ್ಟಣದ ಸ್ಕೂಲ್ ಚಂದನದ ವಿದ್ಯಾರ್ಥಿಗಳು ಬುಧವಾರ ಶಾಲಾ ಅಂಗಳದಲ್ಲಿ ಸಂಭ್ರಮಾಚರಣೆ ಮಾಡಿದರು. ನೂರಾರು ವಿದ್ಯಾರ್ಥಿಗಳು ಸುನಿತಾ ಹಾಗೂ ಅವರ ಸಹ ಗಗನಯಾತ್ರಿಗಳಿಗೆ ಶುಭಕೋರುವ ನಿಟ್ಟಿನಲ್ಲಿ ಪರಸ್ಪರ ಅಭಿನಂದಿಸಿ ಸುನಿತಾ ಅವರ ಹೆಸರಿನಲ್ಲಿ ಜಯಘೋಷಗಳನ್ನು ಕೂಗಿದರು.
9 ತಿಂಗಳ ಅಂತರಿಕ್ಷ ವಾಸದ ನಂತರ ಬಾಹ್ಯಾಕಾಶ ಗರ್ಭದಿಂದ ಭೂತಾಯಿಯ ಮಡಿಲಿಗೆ ಸೇರಿದ ಗಗನಯಾತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಸುನಿತಾ ಅವರು ಭೂಮಿಗೆ ಬರುತ್ತಿದ್ದಂತೆ ಅವರು ಭೂಮಿಗೆ ಮರಳಿ ಬರುವಲ್ಲಿ ಕೈಗೊಂಡ ಆಪರೇಷನ್ ಯಶಸ್ವಿಯಾಗಿರುವದಕ್ಕೆ ಸ್ಕೂಲ್‌ಚಂದನದ ವಿದ್ಯಾರ್ಥಿಗಳು ತಮ್ಮ ಅSಖಔ (ಚಂದನ ಸ್ಪೇಸ್ ರಿಸರ್ಚ ಆರ್ಗನೈಸೇಶನ್) ಕೇಂದ್ರದಿAದ ಅಭಿನಂದನೆಯನ್ನು ಸಲ್ಲಿಸಿದರು. ಸುನಿತಾ ವಿಲಿಯಮ್ಸ್ ಹಾಗೂ ಗಗನಯಾತ್ರಿಗಳ ಆರೋಗ್ಯ ಬೇಗನೆ ಭೂಮಿಗೆ ಹೊಂದಿಕೊಳ್ಳುವಂತಾಗಲಿ ಎಂದು ದೇವರನ್ನು ಪೂಜಿಸಿ ಪ್ರಾರ್ಥನೆ ಸಲ್ಲಿಸಿದರು.
ವಿದ್ಯಾರ್ಥಿಗಳು ನಾಸಾ, ಇಸ್ರೋ, ಸ್ಪೇಸ್ ಎಕ್ಸ್ ಸಂಸ್ಥೆಗೆ ಹಾಗೂ ಶ್ರಮಿಸಿದ ವಿಜ್ಞಾನಿಗಳಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸಿದರು. ಗಗನಯಾತ್ರಿಗಳ ಬಗ್ಗೆ ಧನತ್ಮಾಕವಾದ ವಿಚಾರಗಳನ್ನು ಉತ್ತಮವಾಗಿ ಪ್ರಚಾರ ಮಾಡಿದ ಮಾಧ್ಯಮಗಳಿಗೂ ಸಹ ಮಕ್ಕಳು ಧನ್ಯವಾದ ಸಲ್ಲಿಸಿದರು.