ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಬಾಗಲಕೋಟ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಗೆಲುವು ಸಾಧಿಸುತ್ತಿದ್ದಂತೆ ಇಲ್ಲಿಯ ಬಿಜೆಪಿ ಕಾರ್ಯಕರ್ತರು ಸಂಭ್ರಮವನ್ನಾಚರಿಸಿದರು.
Advertisement
ಪರಸ್ಪರ ಸಿಹಿ ತಿನ್ನಿಸಿ, ಬಣ್ಣ ಹಾಕಿ ಸಂತಸ ವ್ಯಕ್ತಪಡಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. ನಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವಕ್ತಾರ ದತ್ತಣ್ಣ ಜೋಶಿ, ಮುಖಂಡರಾದ ಅಶೋಕ ಬೂದಿಹಾಳ, ಸಿದ್ದು ಮುಳಗುಂದ, ಪ್ರಕಾಶ ಅರಹುಣಶಿ, ಬಸವರಾಜ ಮುಳ್ಳಾಳ, ಮರಿಯಪ್ಪ ವಡ್ಡರ, ಅಂಬರೀಶ ಕವಲೂರ, ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಕವಲೂರು, ನಾಗಪ್ಪ ಕುಂಬಾರ, ವೀರಭದ್ರಪ್ಪ ಕುಂಬಾರ, ಮಹಾಂತೇಶ ಗುರಿಕಾರ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.