ಹಬ್ಬಗಳ ಆಚರಣೆಯಿಂದ ಸಂಘಟನೆಗೆ ಶಕ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಹಬ್ಬಗಳ ಆಚರಣೆ ಮಾಡುವದರಿಂದ ಎಲ್ಲರ ಮನಸ್ಸು ಒಂದುಗೂಡಿಸುತ್ತವೆ. ಎಸ್.ಎಸ್.ಕೆ ಸಮಾಜದ ಸಂಘಟನೆಗೆ ಶಕ್ತಿ ತುಂಬುತ್ತದೆ ಎಂದು ಸರಾಫ್ ಉದ್ಯಮಿ ಹಾಗೂ ಎಸ್.ಎಸ್.ಕೆ ತರುಣ ಸಂಘದ 2025-26ನೇ ಸಾಲಿನ ಶ್ರೀ ಗಜಾನನೋತ್ಸವ ಸಮಿತಿಯ ಚೇರಮನ್ ಮೋಹನಸಾ ಪವಾರ ಹೇಳಿದರು.

Advertisement

ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣ ಸಭಾಗೃಹದಲ್ಲಿ 2025-26ನೇ ಸಾಲಿನ ಶ್ರೀ ಗಜಾನನೋತ್ಸವ ಸಮಿತಿಯಿಂದ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್.ಎಸ್.ಕೆ ಸಮಾಜ ಚಿಕ್ಕದಾದರೂ ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಪ್ರತಿಯೊಂದು ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸುತ್ತ ನಾಡಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಈ ನಿಟ್ಟನಿಲ್ಲಿ ಇಂದಿನ ಯುವ ಪೀಳಿಗೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು. ಮಹಿಳೆಯರ ಪಾತ್ರವೂ ಮುಖ್ಯವಾಗಿರುವದರಿಂದ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ನೀಡುವ ಕೆಲಸವಾಗಬೇಕು. ಸೆ.4ರಂದು ಮಧ್ಯಾಹ್ನ 1 ಗಂಟೆಗೆ ಜರುಗುವ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಂಚ ಕಮಿಟಿ ಉಪಾಧ್ಯಕ್ಷ ರಾಜು ಬದಿ, ತರುಣ ಸಂಘದ ಗೌರವ ಕಾರ್ಯದರ್ಶಿ ನಾಗರಾಜ ಖೋಡೆ, ಕಾರ್ಯದರ್ಶಿ ಶ್ರೀಕಾಂತ ಬಾಕಳೆ, ಖಜಾಂಚಿ ಶ್ರೀನಿವಾಸ ಬಾಂಡಗೆ, ಸಂದೀಪ ಕಬಾಡಿ, ನೇಮಚಂದ ಪವಾರ, ಷಣ್ಮುಖ ಪೂಜಾರಿ, ರಾಜು ಮಗಜಿ, ಸುಧೀರ ಕಾಟಿಗರ, ರಾಘು ಬಾಂಡಗೆ, ರಾಮಚಂದ್ರ ಶಿದ್ಲಿಂಗ, ರಾಜು ಖಟವಟೆ, ಮಹಿಳಾ ಮಂಡಳದ ಅಧ್ಯಕ್ಷರಾದ ಉಮಾ ಬೇವಿನಕಟ್ಟಿ, ಗೀತಾಬಾಯಿ ಹಬೀಬ, ಕಸ್ತೂರಿಬಾಯಿ ಬಾಂಡಗೆ ಮುಂತಾದವರು ಉಪಸ್ಥಿತರಿದ್ದರು.

ನಾಗರಾಜ ಖೋಡೆ ಸ್ವಾಗತಿಸಿದರು. ರೇಖಾಬಾಯಿ ಖಟವಟೆ ನಿರೂಪಿಸಿದರು. ಶ್ರೀಕಾಂತ ಬಾಕಳೆ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿಯ ಅಧ್ಯಕ್ಷ ಫಕೀರಸಾ ಬಾಂಡಗೆ ಉದ್ಘಾಟಿಸಿದರು. ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಪಂಚ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರುಣ ಸಂಘದ ಉಪಾಧ್ಯಕ್ಷ ಮಾಧು ಬದಿ ವಹಿಸಿಕೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏಕ್ ಮಿನಿಟ್ ಶೋ, ರಂಗೋಲಿ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳು ಜರುಗಿದವು.


Spread the love

LEAVE A REPLY

Please enter your comment!
Please enter your name here