ಬಸವ ಯೋಗ ಕೇಂದ್ರಕ್ಕೆ `ಬೆಳ್ಳಿ ಹಬ್ಬ’ದ ಸಂಭ್ರಮ

0
Spread the love

ಮಾನವ ಕುಲದ ಒಳಿತಿಗಾಗಿ ನಮ್ಮ ಪೂರ್ವಜರು, ಋಷಿ-ಮುನಿಗಳು, ಸಾಧು-ಸಂತರು, ಮಹಾತ್ಮರು, ಮೇಧಾವಿಗಳು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಯೋಗವು ಮಹತ್ವಪೂರ್ಣ, ಅದ್ವಿತೀಯ, ಅಪ್ರತಿಮ ಕೊಡುಗೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿ-ಪರAಪರೆ, ದರ್ಶನಗಳಲ್ಲಿ ಯೋಗವು ಅಗ್ರಮಾನ್ಯವಾಗಿದೆ. ಎಲ್ಲಕ್ಕೂ ಮಿಗಿಲಾಗಿ ಯೋಗವು ಪ್ರಾಯೋಗಿಕ ವೈದ್ಯಶಾಸ್ತçವಾಗಿದ್ದು, ಜನತೆಯ ಯೋಗಕ್ಷೇಮ ಸಂರಕ್ಷಿಸುವ ಆರೋಗ್ಯದ ಖಜಾನೆಯಾಗಿದೆ.

Advertisement

ಯೋಗದ ಮಹತ್ವವನ್ನು ಜನತೆಗೆ ತಲುಪಿಸಬೇಕೆಂಬ ಸಂಕಲ್ಪದಿAದ ತ್ರಿವಿಧ ದಾಸೋಹಿ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಎಡೆಯೂರು ಶ್ರೀ ಜಗದ್ಗರು ತೋಂಟದಾರ್ಯ ಸಂಸ್ಥಾನ ಮಠಕ್ಕೆ ಪೀಠಾಧಿಪಾತಿಗಳಾದ ಮೇಲೆ ಮೊದಲಿಗೆ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆ ಸ್ಥಾಪಿಸಿದರು. ಸ್ಥಾಪನೆಯಾದಂದಿನಿAದ ಈ ತನಕ ಯೋಗ ಪಾಠಶಾಲೆಯು ಯೋಗದ ಪ್ರಸಾರ ಪ್ರಚಾರ ಸೇವೆ ಸಲ್ಲಿಸುತ್ತಿದೆ.

ಇಂದು ನಮ್ಮ ನಾಡಿಗೆ ಬೇಕಾಗಿರುವುದು ಅಖಂಡ ಆತ್ಮವಿಶ್ವಾಸ ಹೊಂದಿರುವ ಯುವ ಜನಾಂಗ. ಆದರೆ ನಾಡಿನ ಬೆನ್ನೆಲುಬಾದ ಯುವ ಜನತೆ ಇಂದು ತನ್ನ ತೇಜವನ್ನೆಲ್ಲ ಹೆಚ್ಚಿನಾಂಶ ನಿರುಪಯುಕ್ತ ಕಾರ್ಯಗಳಲ್ಲಿ ಹ್ರಾಸಗೊಳಿಸುತ್ತಿರುವುದನ್ನು ನಿಯಂತ್ರಿಸಲು ಯೋಗವು ಒಂದು ಮಹಾನ್ ಅಸ್ತçವಾಗಿದೆ ಎಂದು ನಂಬಿದ ಪೂಜ್ಯಶ್ರೀಗಳು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಂಗ ಸಂಸ್ಥೆಯನ್ನಾಗಿ ಬಸವ ಯೋಗ ಕೇಂದ್ರ ಸ್ಥಾಪಿಸಿದರು.

ಎಲ್ಲ ವಿದ್ಯೆಗಳಲ್ಲಿ ಯೋಗ ವಿದ್ಯೆ ಶ್ರೇಷ್ಠವಾಗಿದೆ. ಈ ವಿದ್ಯೆಯನ್ನು ಸರ್ವ ಜನಾಂಗಕ್ಕೆ ದೊರಕಿಸುವ ನಿಟ್ಟಿನಲ್ಲಿ ಬಸವ ಯೋಗ ಕೇಂದ್ರವು ಕರ್ನಾಟಕ ಸರಕಾರ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಮಾನ್ಯತೆಯಲ್ಲಿ ೨೦೦೦-೨೦೦೧ನೇ ಶೈಕ್ಷಣಿಕ ವರ್ಷದಿಂದ ಒಂದು ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ ನಡೆಸುತ್ತಲಿದೆ.

ಯೋಗ ಶೈಕ್ಷಣಿಕ ಕ್ಷೇತ್ರವನ್ನು ಇನ್ನೂ ಹೆಚ್ಚು ಬಲಪಡಿಸುವ ಉದ್ದೇಶದಿಂದ ಬಸವ ಯೋಗ ಕೇಂದ್ರವು ೨೦೧೯-೨೦೨೦ನೇ ಶೈಕ್ಷಣಿಕ ವರ್ಷದಿಂದ ಒಂದು ವರ್ಷ ಅವಧಿಯ ಪಿ.ಜಿ ಡಿಪ್ಲೋಮಾ ಇನ್ ಯೋಗ ಸ್ಟಡೀಸ್ ಎಂಬ ಸ್ನಾತಕೋತ್ತರ ಪದವಿ ಕೋರ್ಸ್ನ್ನು ಪ್ರಾರಂಭಿಸಿ ಯುವಕರಲ್ಲಿ ಯೋಗ ಶಿP್ಷÀಣದ ಕಲಿಕಾ ಆಸಕ್ತಿಯನ್ನು ಇಮ್ಮಡಿಗೊಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇಂದು ಯೋಗ ಸರ್ಟಿಫಿಕೆಟ್ ಮತ್ತು ಡಿಪ್ಲೋಮಾ ಕೋರ್ಸ್ ಪಡೆದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ, ಆಯುಷ್ ಇಲಾಖೆಗಳಲ್ಲಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರವು ಕೇವಲ ಯೋಗ ಶಿಕ್ಷಣ ಪ್ರಸಾರ ಸೇವೆಗೆ ಸೀಮಿತವಾಗಿರದೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿದೆ. ಶಾಲಾ-ಕಾಲೇಜ ವಿದ್ಯಾರ್ಥಿಗಳಲ್ಲಿ ಯೋಗಾಸಕ್ತಿ ಹೆಚ್ಚಿಸಲು ಯೋಗಾಸನ ಸ್ಪರ್ಧೆ, ಯೋಗ ಶಿಬಿರ, ಕಾರ್ಯಾಗಾರ, ವಿಚಾರ ಸಂಕಿರಣ, ಯೋಗ ರಸಪ್ರಶ್ನೆ ಎಂದು ಮುಂತಾಗಿ ಸಂಘಟನೆ, ಸಂಶೋಧನೆ, ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

೨೦೨೧-೨೨ ಮತ್ತು ೨೦೨೨-೨೩ನೇ ಸಾಲಿನ ಪಿ.ಜಿ.ಡಿಪ್ಲೋಮಾ ಇನ್ ಯೋಗ ಸ್ಟಡೀಸ್ ಕೋರ್ಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಗೀತಾ ಸಾವುಕಾರ, ಸುಧಾ ಪಾಟೀಲ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದು ಸಾಕ್ಷಿ ಸ್ವರೂಪರಾಗಿರುವರು. ಯೋಗಾಸನ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲದೆ ಸಿಬ್ಬಂದಿಯವರು ಕೂಡಾ ಪ್ರತಿಭಾವಂತರಿದ್ದು, ಪ್ರಾಚಾರ್ಯ ಕೆ.ಎಸ್. ಪಲ್ಲೇದ ಅಧ್ಯಾಪಕರಾದ ಚೇತನ ಚುಂಚಾ, ಬೀಸಪ್ಪ ಬಿ., ಭಾರತಿ ಪಾಟೀಲ ಸ್ವತಃ ಯೋಗಾಸನ ಕ್ರೀಡಾಪಟುಗಳು, ರಾಷ್ಟಿçÃಯ ಯೋಗಾಸನ ಕ್ರೀಡಾ ನಿರ್ಣಾಯಕರೂ ಆಗಿದ್ದಾರೆ.

ಪ್ರಸ್ತುತ ದಿನಮಾನದಲ್ಲಿ ಆರ್ಥಿಕವಾಗಿ ಶ್ರೀಮಂತರಿದ್ದರೂ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಿಲ್ಲದೆ, ನೆಮ್ಮದಿ ಮತ್ತು ಒತ್ತಡ ಮುಕ್ತ ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಆರೋಗ್ಯಯುತ, ಶಾಂತಿಯುತ, ಒತ್ತಡ ಮುಕ್ತ, ನೆಮ್ಮದಿ ಸುಖಕರ ಜೀವನ ಅನ್ವೇಷಣೆಯಲ್ಲಿದ್ದಾರೆ. ಇವರೆಲ್ಲರ ಅನ್ವೇಷಣೆಗೆ ಉತ್ತಮ ಪ್ರತಿಫಲ ನೀಡಲು ಬಸವ ಯೋಗ ಕೇಂದ್ರವು ಸದಾ ಶ್ರಮಿಸುತ್ತಲಿದೆ.

ಯೋಗಾಯೋಗ ಎನ್ನುವಂತೆ ಪರಮ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಎಡೆಯೂರು ಶ್ರೀ ಜಗ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಇವರು ಯೋಗ ಪಾಠಶಾಲೆಗೆ ನೀಡಿದ ೨ ಎಕರೆ ಸ್ಥಳದಲ್ಲಿ ಸುಸಜ್ಜಿತ ಭವ್ಯ ಯೋಗ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಯೋಜನೆ ಕೈಗೊಂಡು ಇತ್ತೀಚಿಗೆ ಪೂಜ್ಯರ ಸಾನ್ನಿಧ್ಯದಲ್ಲಿ ಡಿ.ಆರ್. ಪಾಟೀಲ, ಎಸ್.ವಿ. ಸಂಕನೂರ ಮುಂತಾದ ಗಣ್ಯರ ನೇತೃತ್ವದಲ್ಲಿ ಯೋಗ ಮಹಾವಿದ್ಯಾಲಯದ ನಿಯೋಜಿತ ಕಟ್ಟಡದ ಭೂಮಿ ಪೂಜೆ ಕಾರ್ಯ ನೆರವೇರಿದೆ.

ವಿಶೇಷವಾಗಿ ಬಸವ ಯೋಗ ಕೇಂದ್ರಕ್ಕೆ `ಬಸವÀ ಯೋಗ ಮಹಾವಿದ್ಯಾಲಯ’ ಎಂದು ಮರುನಾಮಕರಣೋತ್ಸವ, ಕರ್ನಾಟಕ ಸಂಭ್ರಮ-೫೦, ಸಾಧಕರಿಗೆ ಸನ್ಮಾನ, ಯೋಗ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಷ್ಟç ಪ್ರಗತಿಗೆ ಪೂರಕವಾಗಿರುವ ಅಭೂತಪೂರ್ವ ಈ ಕಾರ್ಯಕ್ರಮಕ್ಕೆ ಯೋಗಾಭಿಮಾನಿ, ಯೋಗಾಸಕ್ತರೆಲ್ಲರೂ ಆಗಮಿಸಿ ಶೋಭೆ ತನ್ನಿ.

`ಯೋಗವೇ ಜೀವನ-ಯೋಗ ಕಲಿಯಿರಿ-ಯೋಗ ಕಲಿಸಿರಿ’

-ಭಾರತಿ ಪಾಟೀಲ.

ಯೋಗ ಶಿಕ್ಷಕಿ, ಬಸವ ಯೋಗ ಕೇಂದ್ರ,

ಗದಗ.


Spread the love

LEAVE A REPLY

Please enter your comment!
Please enter your name here