ಸಂಭ್ರಮದ ಶ್ರೀ ಚೌಕಿ ಬಸವೇಶ್ವರ ರಥೋತ್ಸವ

0
Celebration Sri Chowki Basaveshwara Rathotsava
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ತಿಮ್ಮಾಪೂರ ಗ್ರಾಮದ ಶ್ರೀ ಚೌಕಿ ಬಸವೇಶ್ವರ ಜಾತ್ರಾ ಮಹೋತ್ಸವ ಶ್ರಾವಣ ಮಾಸದ ಕೊನೆಯ ಸೋಮವಾರ ಸಂಜೆ ಸಡಗರ-ಸಂಭ್ರಮದಿಂದ ನೆರವೇರಿತು.

Advertisement

ರಥೋತ್ಸವದಲ್ಲಿ ಭಜನೆ, ಡೊಳ್ಳು, ವಾದ್ಯ ಮೇಳಗಳ ಝೇಂಕಾರದೊಂದಿಗೆ ಮಹಿಳೆಯರು ಆರತಿ ಕಳಸವನ್ನು ಹಿಡಿದು ದೇವಸ್ಥಾನಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿದರು. ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಫಲಪುಷ್ಪಗಳನ್ನು ರಥದ ಮೇಲೆ ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು.

ರಥವು ಪಾದಗಟ್ಟಿ ಶ್ರೀ ಚನ್ನಬಸವೇಶ್ವರ ದೇವಸ್ಥಾನ ತಲುಪಿದ ನಂತರ ಭಕ್ತರು ಆಕಾಶದ ಎತ್ತರಕ್ಕೆ ಹಾರುವ ಸಿಡಿಮದ್ದು ಪ್ರದರ್ಶನವನ್ನು ನೋಡಿ ಸಂಭ್ರಮಿಸಿದರು.


Spread the love

LEAVE A REPLY

Please enter your comment!
Please enter your name here