ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಪ್ತಋಷಿಗಳಲ್ಲಿ ವೇದ ಮಹರ್ಷಿ ಅಗಸ್ತ್ಯ ಮುನಿಗಳು ಒಬ್ಬರಾಗಿದ್ದು, ಅಗಸ್ತö್ಯ ಮುನಿಗಳು ಇಲ್ಲಿಗೆ ಬಂದು ಶಿವಲಿಂಗವನ್ನು ಸ್ಥಾಪಿಸಿ, ತಪಸ್ಸು ಮಾಡಿದ್ದಾರೆಂದು ಪ್ರತೀತಿಯಿದೆ. ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಸಂಕ್ರಾಂತಿಯಂದು ನಡೆಯುವ ಜಾತ್ರೆಯು ಮಂಗಳವಾರ ಸಾವಿರಾರು ಭಕ್ತರ ಉದ್ಘೋಷದ ನಡುವೆ ವಿಜೃಂಭಣೆಯಿಂದ ಜರುಗಿತು.
Advertisement
ಮಂಗಳವಾರ ಸಂಜೆ ಸಾವಿರಾರು ಭಕ್ತರ ಘೋಷಣೆಯ ಮಧ್ಯೆ ರಥೋತ್ಸವ ನಡೆಯಿತು. ಗ್ರಾಮೀಣ ಪ್ರದೇಶಗಳಿಂದ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಮೆರದರು.