ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ‘ಅ’ ಮತ್ತು ‘ಬ’ ಘಟಕಗಳ ವತಿಯಿಂದ ಕೋಡಿಕೊಪ್ಪ ಮತ್ತು ಶ್ರೀ ಅನ್ನದಾನೇಶ್ವರ ನಗರದಲ್ಲಿ ಸಾಮಾಜಿಕ, ಶೈಕ್ಷಣಿಕ ಗಣತಿಯ ಸಮೀಕ್ಷಾ ಜಾಗೃತಿ ಜಾಥಾವನ್ನು ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಗಣತಿದಾರರು ನಿಮ್ಮ ಮನೆಯ ಬಾಗಿಲಿಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿಗಳನ್ನು ನೀಡಿ ಸಹಕರಿಸಿ. ಈ ಗಣತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಸರ್ಕಾರ ಸಿಗಲಿದೆ. ಮನೆಯಲ್ಲಿರುವ ಸದಸ್ಯರ ಮಾಹಿತಿಯನ್ನು ಸರಿಯಾಗಿ ನೀಡಿ ಸಹಕರಿಸಬೇಕೆಂದು ಪ್ರಾಧ್ಯಾಪಕ ಡಾ. ಎಂ.ಆರ್. ಶಿವರಾಮ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಡಾ. ಕಲ್ಲಯ್ಯ ಹಿರೇಮಠ, ಪುಂಡಲೀಕ ಮಾದರ, ದೈಹಿಕ ನಿರ್ದೇಶಕ ಎಸ್.ಬಿ. ಗೌಡರ, ಡಾ. ಆರ್.ಆರ್. ಪಾಟೀಲ, ಡಾ. ಡಿ.ಎಲ್. ಪವಾರ, ಡಾ. ಸಂದೀಪಕುಮಾರ್, ಡಾ. ಹೃಷಿಕೇಶ್ ಪವಾರ, ರಾಮಚಂದ್ರ ಜೆ.ಗಡ್ಡದ, ಎ.ಎಸ್. ನವೀನ್ ತಳವಾರ, ಪ್ರಶಾಂತ ದಾಸರ ಮುಂತಾದವರಿದ್ದರು.