ರುದ್ರಪ್ಪ ಪಟ್ಟಣಶೆಟ್ಟಿ ಕುಟುಂಬದಿಂದ ನೇತ್ರದಾನ-ದೇಹದಾನ

0
Centenary Rudrappa Pattanashetty passed away
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಳಗುಂದ ರಸ್ತೆಯ ನಿವಾಸಿ, ಗಣ್ಯ ವ್ಯಾಪಾರಸ್ಥರಾಗಿದ್ದ ಶತಾಯುಷಿ ರುದ್ರಪ್ಪ ರೇವಣಪ್ಪ ಪಟ್ಟಣಶೆಟ್ಟಿ (102) ಗುರುವಾರ ಮುಂಜಾನೆ 11.30ಕ್ಕೆ ನಿಧನರಾದರು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ಮೃತರ ನೇತ್ರದಾನವನ್ನು ಮಾಡುವಂತೆ ವಿನಂತಿಸಿದರು. ನೇತ್ರದಾನ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ ಅಧ್ಯಯನಕ್ಕಾಗಿ ದೇಹದಾನಕ್ಕೂ ಕುಟುಂಬದವರು ಒಪ್ಪಿಗೆ ನೀಡುವ ಮೂಲಕ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ.
Centenary Rudrappa Pattanashetty passed away
ಹುಬ್ಬಳ್ಳಿಯ ಡಾ.ಎಂ.ಎಂ.ಜೋಷಿ ನೇತ್ರಾಲಯದ ತಜ್ಞ ವೈದ್ಯರ ತಂಡದವರು ನಗರಕ್ಕೆ ಆಗಮಿಸಿ ನೇತ್ರದಾನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತರ ಪಾರ್ಥಿವ ಶರೀರವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಗದಗ ಜಿಮ್ಸ್ಗೆ ಸಾಗಿಸಲಾಯಿತು.
ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ನಿತೀಶ್ ಸಾಲಿ, ಖಜಾಂಚಿ ಲಿಂಗರಾಜ ತೋಟದ, ರಮೇಶ ಶಿಗ್ಲಿ, ರೆಡ್ ಕ್ರಾಸ್ ಸಂಸ್ಥೆಯ ಡಾ. ರಾಜೇಂದ್ರ ಗೋಡಬೋಲೆ, ಡಾ. ಸಾಮುದ್ರಿ, ಸಂಜಯ ಭಾಗಮಾರ, ಸುನೀಲ್ ಮೊಮ್ಮಾಯ್ ಮುಂತಾದವರು ಈ ಪ್ರಕ್ರಿಯೆಗೆ ಸಹಕಾರ ನೀಡಿದರು.
Advertisement
ಅಂಧರಿಗೆ ಬೆಳಕಾಗಿ
ಪುರುಷ ಅಥವಾ ಮಹಿಳೆ ಯಾರೇ ಮರಣ ಹೊಂದಿದರೂ ಅವರ ಕಣ್ಣುಗಳನ್ನು ಮಣ್ಣು ಮಾಡದೇ, ಸುಡದೇ ಕುಟುಂಬದವರು ನೇತ್ರದಾನಕ್ಕೆ ಸಹಕಾರ ನೀಡಬೇಕು. ಇದರಿಂದ ಕಣ್ಣಿಲ್ಲದೆ ಅಂಧಕಾರದಲ್ಲಿರುವವರ ಬದುಕಿಗೆ ಬೆಳಕಾಗಿ ಅವರು ಜಗತ್ತನ್ನು ನೋಡುವಂತಾಗುತ್ತದೆ. ಇಂತಹ ಪುಣ್ಯದ ಕಾರ್ಯಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಬರಬೇಕಿದೆ.
– ನಿತೀಶ್ ಸಾಲಿ.
ಅಧ್ಯಕ್ಷರು, ಲಯನ್ಸ್ ಕ್ಲಬ್.

Spread the love

LEAVE A REPLY

Please enter your comment!
Please enter your name here