ಕೊಪ್ಪಳ:- ಕರ್ನಾಟಕದಲ್ಲಿ ಡೀಸೆಲ್ ದರ ಏರಿಕೆ ಆಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಬರುವ ಮುನ್ನ ಇದ್ದ ಡಿಸೇಲ್ ದರ ಈಗ ಏರಿಕೆಯಾಗಿದೆ. ಕೇಂದ್ರ ಸರ್ಕಾರ ದರ ಹೆಚ್ಚಳ ಮಾಡಿದ್ದರಿಂದ ನಾವು ಹೆಚ್ಚು ಮಾಡಿದ್ದೇವೆ. ಅವರು ಕಡಿಮೆ ಮಾಡಿದ್ರೆ ನಾವು ದರ ಇಳಿಕೆ ಮಾಡುತ್ತೇವೆ ಎಂದರು.
ಇನ್ನೂ ಡಿಸೇಲ್ ದರ ಏರಿಕೆ ವಿರೋಧಿಸಿ ಲಾರಿ ಮಾಲೀಕರ ಮುಷ್ಕರ ವಿಚಾರವಾಗಿ ಮಾತನಾಡಿ, ಈ ಕುರಿತು ಲಾರಿ ಮಾಲೀಕರೊಂದಿಗೆ ಸಿಎಂ ಮಾತನಾಡಲಿದ್ದಾರೆ. ಮುಷ್ಕರ ನಡೆಸಿದರೆ ಅವರಿಗೆ ತೊಂದರೆ. ಹೀಗಾಗಿ ಮುಷ್ಕರ ಕೈ ಬಿಡಬೇಕು ಎಂದು ಮನವಿ ಮಾಡಿದರು.


