ಕೇಂದ್ರದಿಂದ ಹಿಂಗಾರು ಬೆಳೆಗೆ ಬೆಲೆ ಹೆಚ್ಚಳ: ಸಚಿವ ಪ್ರಲ್ಹಾದ್ ಜೋಶಿ

0
Spread the love

ಹುಬ್ಬಳ್ಳಿ :ಕೇಂದ್ರದಿಂದ ಹಿಂಗಾರು ಬೆಳೆಗೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮುಂಬರುವ 2024-25 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

Advertisement

ಗೋಧಿ ಸೇರಿ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ರೈತರ ಆದಾಯ ವೃದ್ಧಿಸುವ ಜತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ತಿಳಿಸಿರುವ ಅವರು ಈ ಕುರಿತು ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಪ್ರಕಾರ ಚನ್ನಂಗಿ ಬೇಳೆ ಪ್ರತಿ ಕ್ವಿಂಟಾಲ್​ಗೆ 425 ರೂ. ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಾಲ್​ಗೆ 6,425 ರೂ. ನಿಗದಿ ಮಾಡಲಾಗಿದೆ. ಗೋಧಿಗೆ 150 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 2,275 ರೂ. ನಿಗದಿ ಮಾಡಲಾಗಿದೆ. ಕಡಲೆ 105 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 5,440 ರೂ. ನಿಗದಿ ಮಾಡಲಾಗಿದೆ.

ಬಾರ್ಲಿಗೆ 115 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್ ಗೆ 1,850 ರೂ. ನಿಗದಿ ಮಾಡಲಾಗಿದೆ. ಸಾಸಿವೆಗೆ 200 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಾಲ್​ಗೆ 5,650 ರೂ. ನಿಗದಿ ಮಾಡಲಾಗಿದೆ. ಕುಸುಬೆಗೆ 150 ರೂ. ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಾಲ್ ಗೆ 5,800 ರೂ. ನಿಗದಿ ಪಡಿಸಲಾಗಿದೆ. 2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ, ಈ ಬಾರಿ ಶೇ. 50 ರಷ್ಟು ಹೆಚ್ಚಳ ಮಾಡಿರುವುದು ಮೋದಿ ಸರ್ಕಾರದ ವಿಶೇಷ ಎಂದು ಸಚಿವ ಜೋಶಿ ಹೇಳಿದ್ದಾರೆ.ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗ ಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಅವರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here