- ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ |
ವಿಜಯಸಾಕ್ಷಿ ಸುದ್ದಿ, ಡಂಬಳ
ಸಮಗ್ರ ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರಾವಧಿಯಲ್ಲಿ ಅನುದಾನ ಒದಗಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವದಾಗಿ ನೂತನ ಖನಿಜ ನಿಗಮದ ಅಧ್ಯಕ್ಷ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಂಬಳ ಹೋಬಳಿಯಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಮೂಲಕ ಡಂಬಳ ಕೆರೆ, ಜಂತ್ಲಿಶಿರೂರ, ಪೇಠಾ ಆಲೂರ, ತಾಮ್ರಗುಂಡಿ ಕೆರೆಗಳನ್ನು ತುಂಬಿಸುವ ಮೂಲಕ ರೈತರ ಕಲ್ಯಾಣ ಕಾರ್ಯವನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಶಾಲಾ ಕಟ್ಟಡ, ರಸ್ತೆ ಅಭಿವೃದ್ಧಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈಗಾಗಲೇ ಕದಾಂಪುರ ಮತ್ತು ಡೋಣಿ ಗ್ರಾಮಕ್ಕೆ ೩ ಕೋಟಿ ರೂ ಅನುದಾನ ಕಲ್ಪಿಸಲಾಗಿದೆ. ಇದರಿಂದ ಡೋಣಿ, ಡೋಣಿತಾಂಡ, ಕಪ್ಪತ್ತಗುಡ್ಡಕ್ಕೆ ತೆರಳುವದಕ್ಕೆ ಸಹಕಾರಿಯಾಗಲಿದೆ. ರಾಜ್ಯದ ಕಡುಬಡವರ ಹಿತ ಕಾಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ನೀಡಲಾಗುತ್ತಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಸಂಕಷ್ಟದಿಂದ ಹೋರಬರುವಂತೆ ಮಾಡಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದರ ಮೂಲಕ ಜನಸಾಮಾನ್ಯರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಎಸ್.ಪೂಜಾರ, ಈರಣ್ಣ ಯಳವತ್ತಿ, ಕಾಶಪ್ಪ ಕುರಿ, ಮುತ್ತಪ್ಪ ಕಿಲಾರಿ, ಎಸ್.ಆರ್. ಪಾಟೀಲ, ಮೌನೇಶ ಹೂವಣ್ಣವರ, ಕಾಶಣ್ಣ ಹೊಣ್ಣುರ, ಸೋಮನಾಥ ಹಳ್ಳಿಕೇರಿ, ಈರಣ್ಣ ಓಲಿ, ಹನಮಪ್ಪ ಗೋಡಿ, ಮಳಪ್ಪ ಜೋಂಡಿ, ರಾಚಪ್ಪ ಗಾಳಪ್ಪನವರ, ಯಮನಪ್ಪ ಈಳಗೇರ, ಕಾಶಪ್ಪ ಅಳವುಂಡಿ, ಮೌನೇಶ ಕೊಪ್ಪಳ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.
ಬಾಕ್ಸ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 10 ವರ್ಷದಲ್ಲಿ 120 ಸಾವಿರ ಲಕ್ಷ ಕೋಟಿ ರೂ. ಸಾಲ ಮಾಡುವ ಮೂಲಕ ದೇಶವನ್ನು ಆರ್ಥಿಕ ದುಃಸ್ಥಿತಿಗೆ ತಂದಿದೆ. ಜನಸಾಮಾನ್ಯರ ವಿಶ್ವಾಸ ಗಳಿಸಿದ್ದ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿ ಖಾಸಗಿ ಕಂಪನಿಗಳಿಗೆ ನೀಡಿದ್ದಾರೆ. ಯುವಕರಿಗೆ ಸೂಕ್ತ ಉದ್ಯೋಗ ನೀಡದೆ ನಿರುದ್ಯೋಗ ಸೃಷ್ಟಿ ಮಾಡಿದ್ದೇ ಇವರ ದೊಡ್ಡ ಸಾಧನೆಯಾಗಿದೆ. ಇದನ್ನೆಲ್ಲ ನೋಡುತ್ತಿರುವ ಯುವಕರು, ಕಾರ್ಮಿಕರು, ಕಡು ಬಡವರು, ರೈತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.
- ಜಿ.ಎಸ್. ಪಾಟೀಲ.
ಶಾಸಕರು, ರೋಣ.