ಬೆಂಗಳೂರು:– ಕೇಂದ್ರದಿಂದ ತೆರಿಗೆ ಹಂಚಿಕೆ ತಾರತಮ್ಯ ಖಂಡಿಸಿ 8 ರಾಜ್ಯಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಅನ್ಯಾಯದ ತೆರಿಗೆ ಹಂಚಿಕೆ ಕುರಿತು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಸಿಎಂಗಳಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಕಳೆದ ಫೆಬ್ರವರಿ ಹೊತ್ತು ಡೆಲ್ಲಿಯಲ್ಲಿ ಝೆಂಡಾ ಹೊಡೆದಿದ್ದ ಸಿದ್ದು ಸರ್ಕಾರ, ಮೋದಿ ವಿರುದ್ಧ ಹೂಂಕರಿಸಿದ್ರು. ಈಗ ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಮತ್ತೆ ಕದನಕ್ಕೆ ಬಿದ್ದಿದ್ದಾರೆ.
ಕರ್ನಾಟಕ ಮತ್ತು ಇತರೆ ತಲಾವಾರು ಜಿಎಸ್ಡಿಪಿ ಹೆಚ್ಚಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ದಂಡವನ್ನು ಅನುಭವಿಸುತ್ತಿವೆ. ಅಸಮಾನವಾಗಿ ಕಡಿಮೆ ತೆರಿಗೆ ಹಂಚಿಕೆಗಳನ್ನ ಪಡೆಯುತ್ತಿವೆ. ಈ ಅನ್ಯಾಯದ ನಡೆ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತೆ.
ಪ್ರಗತಿಪರ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ. ಹಣಕಾಸು ಆಯೋಗವು ಬದಲಾವಣೆಯನ್ನು ಮಾಡುವ ಹಾಗೂ ಬೆಳವಣಿಗೆ ಮತ್ತು ಉತ್ತಮ ತೆರಿಗೆ ಕ್ರೋಢೀಕರಣಕ್ಕಾಗಿ ಉತ್ತೇಜಕಗಳನ್ನು ರಚಿಸುವ ಅಗತ್ಯವಿರುವಾಗ ಹಣಕಾಸಿನ ಒಕ್ಕೂಟದ ಸಮಸ್ಯೆಗಳ ಕುರಿತು ಒಟ್ಟಾಗಿ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ನಾನು ಅವರನ್ನು ಆಹ್ವಾನಿಸಿದ್ದೇನೆ ಎಂದಿದ್ದಾರೆ.