ಕೋಲಾರ: ಸಿಎಂ ಹೆಸರಿಗೆ ಕಳಂಕ ತರಲು ಕೇಂದ್ರ ಸರ್ಕಾರದಿಂದ ಸಂಚು ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೇಸ್ ಸಿಬಿಐ ನೀಡಿಲ್ಲ. ಹೀಗಿರುವಾಗ ಬಿಜೆಪಿಗೆ ಒಂದು, ಬೇರೆಯವರಿಗೆ ಒಂದು ಮಾನದಂಡನಾ ಎಂದು ಪ್ರಶ್ನಿಸಿ, ಸಿಎಂ ಹೆಸರಿಗೆ ಕಳಂಕ ತರಲು ಕೇಂದ್ರ ಸರಕಾರದಿಂದ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್‌ಗೆ ಸೇರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಜನಾರ್ದನ್ ರೆಡ್ಡಿ, ಶ್ರೀರಾಮುಲು ಜಗಳಕ್ಕೆ ನಮ್ಮನ್ನು ಯಾಕೆ ಸೇರಿಸುತ್ತೀರಿ. ಬಿಜೆಪಿಯಲ್ಲಿ ಒಡೆದ ಮನೆಯಾಗಿ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಯುತ್ತಿದೆ ಎಂದರು.
ನಾನು ಯಾರನ್ನು ಸಂಪರ್ಕ ಮಾಡಿಲ್ಲ ಅಂತ ಶ್ರೀರಾಮುಲು ಹೇಳಿದ್ದಾರೆ. ಕಾಂಗ್ರೆಸ್ ಶ್ರೀರಾಮಲು ಅವರನ್ನು ಕಾಂಗ್ರೆಸ್‌ಗೆ ಕರೆತರುವ ಕೆಲಸವೂ ಮಾಡಿಲ್ಲ, ಜನಾರ್ದನ ರೆಡ್ಡಿನ ಪಕ್ಷಕ್ಕೆ ಏಕೆ ಸೇರ್ಪಡೆ ಮಾಡಿಕೊಂಡೆವು ಅನ್ನೋ ಭಾವನೆ ಬಿಜೆಪಿಗೆ ಈಗ ಬಂದಿದೆ ಎಂದು ಲೇವಡಿ ಮಾಡಿದರು.