ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನ ನೇಮಕ ಮಾಡೋದು ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ

0
Spread the love

ಬೆಂಗಳೂರು: ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನ ನೇಮಕ ಮಾಡೋದು ಕೇಂದ್ರ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಥನಾಡಿದ ಅವರು, ಮೆಟ್ರೋ ದರ ನಿಗದಿ ಮಾಡುವ ಕಮಿಟಿಯನ್ನ ನೇಮಕ ಮಾಡೋದು ಕೇಂದ್ರ ಸರ್ಕಾರ.

Advertisement

ಆ ಕಮಿಟಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿ, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಮೆಟ್ರೋ ಸ್ವಾಯತ್ತ ಸಂಸ್ಥೆ ಆದರೂ ಮೆಟ್ರೋವನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ನಡೆಸುತ್ತವೆ ಎಂದರು.

ಬೆಲೆ ನಿಗದಿ ಮಾಡಿ, ಏರಿಕೆ ಮಾಡಿ ಅಂತ ನಾವು ಪ್ರಪೋಸಲ್ ಕೊಡುತ್ತೇವೆ. ಆದರೆ ಬೆಲೆ ನಿಗದಿ ಮಾಡೋದು ಕಮಿಟಿ ಅವರು. ಆ ಕಮಿಟಿಯ ಅಧ್ಯಕ್ಷರನ್ನು ಆಯ್ಕೆ ಮಾಡೋದು ಕೇಂದ್ರ ಸರ್ಕಾರದವರು ಅನ್ನೋ ಮೂಲಕ ಕೇಂದ್ರ ಸರ್ಕಾರವೇ ಮೆಟ್ರೋ ದರ ಏರಿಕೆ ಮಾಡಿರೋದು ಎಂದು ಪರೋಕ್ಷವಾಗಿ ಆರೋಪ ಮಾಡಿದರು.

 


Spread the love

LEAVE A REPLY

Please enter your comment!
Please enter your name here