ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಳದ ಪರಿಶೀಲನೆ, ಶಾಲಾ-ಕಾಲೇಜುಗಳಿಗೆ ಭೇಟಿ ಹಾಗೂ ವಿವಿಧ ಇಲಾಖೆಯ ವತಿಯಿಂದ ನಡೆಯುತ್ತಿರುವ ಕೆಲಸ-ಕಾರ್ಯಗಳನ್ನು ವೀಕ್ಷಣೆ ಮಾಡಿ, ಸರಕಾರದ ನಿಯಮಾನುಸಾರ ಸಮರ್ಪಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಆರ್.ವಿ. ದೊಡ್ಡಮನಿ, ತಿಪ್ಪಣ್ಣ ಕೊಂಚಿಗೇರಿ, ಗ್ರಾ.ಪಂ ಅಧ್ಯಕ್ಷೆ ಹೇಮಾ ಹರ್ಲಪೂರ, ಉಪಾಧ್ಯಕ್ಷೆ ಗಿರಿಜಾ ಲಮಾಣಿ, ಸದಸ್ಯರಾದ ನಿರ್ಮಲಾ ಅಡವಿ, ಬಸವ್ವ ಮಾದರ, ಸಿದ್ದಪ್ಪ ಮುಧೋಳ, ರುದ್ರಗೌಡ ಪಾಟೀಲ, ರಾಮಣ್ಣ ಹರ್ಲಾಪೂರ, ಕಾವೇರಿ ಕಟಗಿ, ಮಾರ್ತಾಂಡಪ್ಪ ಹರಿಜನ, ಶಿವಪ್ಪ ಕದಂ, ಕೃಷ್ಣಾ ಲಮಾಣಿ, ಜಯವ್ವ ಉಪ್ಪಾರ, ನೀಲಮ್ಮ ನೆರ್ತಿ, ಮಂಜುನಾಥ ಹಾವೇರಿ, ಪಿಡಿಓ ಸುಜಾತಾ ಕಪ್ಪಲಿ ಮುಂತಾದವರು ಉಪಸ್ಥಿತರಿದ್ದರು.